Home ಟಾಪ್ ಸುದ್ದಿಗಳು ‘ಸಂವಿಧಾನ ಅಪಾಯದಲ್ಲಿದೆ’: ರಾಜೀನಾಮೆ ನೀಡಿದ ಅಸಿಸ್ಟೆಂಟ್​ ಕಮಾಂಡೆಂಟ್ ಸುಹೇಲ್​ ಅಹಮದ್​​

‘ಸಂವಿಧಾನ ಅಪಾಯದಲ್ಲಿದೆ’: ರಾಜೀನಾಮೆ ನೀಡಿದ ಅಸಿಸ್ಟೆಂಟ್​ ಕಮಾಂಡೆಂಟ್ ಸುಹೇಲ್​ ಅಹಮದ್​​

ಬೆಂಗಳೂರು: ಸಂವಿಧಾನ ಅಪಾಯದಲ್ಲಿದೆ ಎಂದು ಹೇಳಿ (ನ.26) ಸಂವಿಧಾನ ದಿನದಂದೇ ಸರ್ಕಾರಿ ಅಧಿಕಾರಿಯೊಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.

ಸುಹೇಲ್​ ಅಹಮದ್​​ ರಾಜೀನಾಮೆ ನೀಡಿದ ಅಧಿಕಾರಿ. ಆಂತರಿಕ ಭದ್ರತಾ ವಿಭಾಗದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ 1ನೇ ಪಡೆಗೆ ಅಸಿಸ್ಟೆಂಟ್​ ಕಮಾಂಡೆಂಟ್​ ಆಗಿದ್ದರು. ಇದೀಗ ಆ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ತಮ್ಮ ಫೇಸ್​ಬುಕ್​ ಖಾತೆಯಲ್ಲಿ ರಾಜೀನಾಮೆ ಪತ್ರವನ್ನು ಪೋಸ್ಟ್​ ಮಾಡಿರುವ ಸುಹೇಲ್​ ಅಹಮದ್​​, ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಸಂವಿಧಾನದ ತತ್ವ ಆಶಯಗಳು ಅಪಾಯದಲ್ಲಿರುವುದರಿಂದ ಸಂವಿಧಾನ ನನಗೆ ಕೊಡುಗೆಯಾಗಿ ನೀಡಿರುವ ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಗೆ, ದೇಶಕ್ಕೆ ಸಂವಿಧಾನ ಸಮರ್ಪಣೆಯಾದ ಮಹತ್ವದ ದಿನದಂದೇ ಸಂವಿಧಾನದ ಕಾಯಕಲ್ಪ ಸಂಕಲ್ಪದೊಂದಿಗೆ ರಾಜಿನಾಮೆ ಸಲ್ಲಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.

Join Whatsapp
Exit mobile version