Home ಕರಾವಳಿ ಹಿಜಾಬ್ ತೀರ್ಪಿಗೆ ವಿರೋಧ: ಉಜಿರೆ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ಭಿತ್ತಿ ಪತ್ರ ಹಿಡಿದು ಪ್ರತಿಭಟನೆ

ಹಿಜಾಬ್ ತೀರ್ಪಿಗೆ ವಿರೋಧ: ಉಜಿರೆ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ಭಿತ್ತಿ ಪತ್ರ ಹಿಡಿದು ಪ್ರತಿಭಟನೆ

ಬೆಳ್ತಂಗಡಿ: ಹೈಕೋರ್ಟ್ ನೀಡಿದ ತೀರ್ಪು ವಿರೋಧಿಸಿ ಉಜಿರೆ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ಭಿತ್ತಿ ಪತ್ರ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಉಜಿರೆ ಎಸ್.ಡಿ.ಎಮ್ ಪದವಿ ಕಾಲೇಜಿನ ಐದು ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ಉಜಿರೆ ಕ್ರೀಡಾಂಗಣದ ರಸ್ತೆಯ ಗೇಟ್ ಬಳಿ ಕಾಲೇಜ್ ಕಾಣುವಂತೆ ನಿಂತುಕೊಂಡು ‘ಹೈಕೋರ್ಟ್ ತೀರ್ಪು ನೀಡಿದೆ, ನ್ಯಾಯ ನೀಡಿಲ್ಲ’, ‘ಸರಕಾರವನ್ನು ಓಲೈಸುವ ತೀರ್ಪು ನಮಗೆ ಒಪ್ಪಲು ಸಾಧ್ಯವಿಲ್ಲ’ ಎಂಬ ಐದು ಭಿತ್ತಿ ಪತ್ರ ತೊರಿಸುವ ಮೂಲಕ ಫೋಟೋ ತೆಗೆಸಿಕೊಂಡಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ‌.

Join Whatsapp
Exit mobile version