Home ಕರಾವಳಿ ಪ್ರಯಾಣಿಕರ ಸಂಖ್ಯೆ ವಿರಳ: ಮಂಗಳೂರಿನಲ್ಲಿ ಬಹುತೇಕ ಖಾಸಗಿ ಬಸ್ಸುಗಳ ಓಡಾಟ ಸ್ಥಗಿತ

ಪ್ರಯಾಣಿಕರ ಸಂಖ್ಯೆ ವಿರಳ: ಮಂಗಳೂರಿನಲ್ಲಿ ಬಹುತೇಕ ಖಾಸಗಿ ಬಸ್ಸುಗಳ ಓಡಾಟ ಸ್ಥಗಿತ

ಮಂಗಳೂರು: ಹಿಜಾಬ್ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯದ ಮುಸ್ಲಿಮ್ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ಗೆ ಮಂಗಳೂರು, ಉಡುಪಿ ಸೇರಿದಂತೆ ಹಲವೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಂಗಳೂರಿನಲ್ಲಿ ಖಾಸಗಿ ಬಸ್ಸುಗಳ ಓಡಾಟ ಸ್ಥಗಿತಗೊಂಡಿವೆ.

ನಗರದಲ್ಲಿ ಮಧ್ಯಾಹ್ನದವರೆಗೆ ಸಂಚರಿಸಿದ ಕೆಲವು ಬಸ್ ಗಳು ಬಳಿಕ ಪ್ರಯಾಣಿಕರಿಲ್ಲದೆ ಸ್ಥಗಿತಗೊಂಡಿವೆ. ಮಧ್ಯಾಹ್ನದ ಬಳಿಕ ಬಸ್ ಗಳು ನಗರದ ಸ್ಟೇಟ್ ಬ್ಯಾಂಕ್ ಬಳಿ ರಸ್ತೆಯ ಇಕ್ಕೆಲೆಗಳಲ್ಲಿಯೂ ನಿಲ್ಲಿಸಿರುವುದು ಕಂಡುಬಂತು.

ರಾಜ್ಯದ ಬಹುತೇಕ ಮುಸ್ಲಿಂ ವರ್ತಕರು ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ಸೂಚಿಸಿದ್ದು, ಬಸ್, ಆಟೋ ರಿಕ್ಷಾ, ಟ್ಯಾಕ್ಸಿಗಳು ಸಂಚಾರ ನಿಲ್ಲಿಸಿ ಬಂದ್’ಗೆ ಬೆಂಬಲ ನೀಡಿವೆ.

blob:https://prasthutha.com/436cc0ad-4cca-4c17-9a63-697b4c2333ce
Join Whatsapp
Exit mobile version