ಚೆನ್ನೈ: ಹೊರ ರಾಜ್ಯದಿಂದ ಬಂದ ವಿದ್ಯಾರ್ಥಿಗಳಿಂದಾಗಿಯೇ ರಾಜ್ಯದಲ್ಲಿ ಕೋವಿಡ್ -19 ಉಲ್ಭಣಗೊಳ್ಳಲು ಕಾರಣ ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುಮಾರು 91 ಶತಮಾನದಷ್ಟು ವಿದ್ಯಾರ್ಥಿಗಳು ಒಮಿಕ್ರಾನ್ ಬಿಎ.2 ರೂಪಾಂತರಕ್ಕೆ ಒಳಗಾಗಿದ್ದಾರೆ. ಇದಕ್ಕೆ ಕಾರಣ ಇತರ ರಾಜ್ಯಗಳಿಂದ, ವಿಶೇಷವಾಗಿ ಉತ್ತರ ಭಾರತದಿಂದ ಬರುವ ವಿದ್ಯಾರ್ಥಿಗಳಾಗಿದ್ದಾರೆ. ಆದರೆ ಆತಂಕಪಡುವ ಅಗತ್ಯ ಇಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿರುವುದರಿಂದ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸುಬ್ರಮಣಿಯನ್ ಹೇಳಿದ್ದಾರೆ.
ಸಾಂಕ್ರಾಮಿಕ ರೋಗಗಳಿಗೆ ಹರಡಲು ಯಾವುದೇ ರಾಜ್ಯದ ಗಡಿಯ ಅಗತ್ಯವಿಲ್ಲ. ಇದು ಸಚಿವರ ಅತ್ಯಂತ ಬೇಜವಾಬ್ದಾರಿ ಮತ್ತು ಅವಹೇಳನಕಾರಿ ಹೇಳಿಕೆಯಾಗಿದ್ದು, ಉತ್ತರ ಭಾರತೀಯರನ್ನು ಅವಮಾನಿಸಿದ್ದಾರೆ ಎಂದು ಉತ್ತರ ಪ್ರದೇಶದ ಸಚಿವ ಜಿತಿನ್ ಪ್ರಸಾದ ಆರೋಪಿಸಿದ್ದಾರೆ.
ಉತ್ತರ ಭಾರತದ ವಿದ್ಯಾರ್ಥಿಗಳು ಸಾಂಕ್ರಾಮಿಕ ರೋಗವನ್ನು ಹರಡುತ್ತಿದ್ದಾರೆ ಎಂಬ ಹೇಳಿಕೆಗೆ ಸಚಿವರನ್ನು ಟ್ರೋಲ್ ಮಾಡಲಾಗಿದ್ದು ಟ್ವಿಟ್ಟರ್ ನಲ್ಲಿ ನೆಟ್ಟಿಗರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.