Home ಟಾಪ್ ಸುದ್ದಿಗಳು ಶೌಚಗುಂಡಿಗೆ ಬಿದ್ದು 8 ವರ್ಷದ ಬಾಲಕ ಸೇರಿ ಮೂವರು ಮೃತ್ಯು

ಶೌಚಗುಂಡಿಗೆ ಬಿದ್ದು 8 ವರ್ಷದ ಬಾಲಕ ಸೇರಿ ಮೂವರು ಮೃತ್ಯು

ಹರಿಯಾಣ: ಎಂಟು ವರ್ಷದ ಬಾಲಕ ಸೇರಿದಂತೆ ಮೂವರು ಶೌಚಗುಂಡಿಯೊಳಗೆ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನುಹ್ ಜಿಲ್ಲೆಯ  ಬಿಚೋರ್ ಗ್ರಾಮದಲ್ಲಿ ನಡೆದಿದೆ.

ಆರಿಜ್(8) ಸಿರಾಜ್ (30)   ಸಲಾಮ್ (35) ಮೃತಪಟ್ಟವರು. ಬಾಲಕನು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ  ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದದ್ದನ್ನು ಕಂಡು ಹುಡುಗನ ತಂದೆ ಮತ್ತು ಇನ್ನೊಬ್ಬ ವ್ಯಕ್ತಿ ರಕ್ಷಿಸಲು ಪ್ರಯತ್ನಿಸಿದರು. ಘಟನೆಯಲ್ಲಿ ಮೂವರೂ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮದ ನಿವಾಸಿ ದಿನು ಎಂಬವರ ಮನೆಯ ಹೊರಗೆ ನಿರ್ಮಿಸಲಾದ 20 ಅಡಿ ಆಳದ ಸೆಪ್ಟಿಕ್ ಟ್ಯಾಂಕ್(ಶೌಚಗುಂಡಿ) ಯನ್ನು ಕಲ್ಲಿನ ಚಪ್ಪಡಿಯಿಂದ ಮುಚ್ಚಲಾಗಿತ್ತು. ಅದರ ಬಳಿ ಆಟವಾಡುತ್ತಿದ್ದ ದಿನು ಅವರ ಮೊಮ್ಮಗ ಆರಿಜ್ ಮುಚ್ಚಲಾಗಿದ್ದ ಚಪ್ಪಡಿ ಕಲ್ಲಿನ ಮೇಲೆ ನಿಂತಾಗ ಕಲ್ಲು ತುಂಡಾಗಿ ಗುಂಡಿಯೊಳಕ್ಕೆ ಬಿದ್ದಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಬಾಲಕನ ತಂದೆ ಸಿರಾಜ್ ಮತ್ತು ಆತನ ಚಿಕ್ಕಪ್ಪ ಸಲಾಮ್ ಬಾಲಕನನ್ನು ರಕ್ಷಿಸುವ ಪ್ರಯತ್ನದಲ್ಲಿ ಟ್ಯಾಂಕ್ ಗೆ ಇಳಿದಿದ್ದರು. ಆದರೆ ಯಾರೂ ಹೊರಗೆ ಬರಲಾಗದೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ಯಾವುದೇ ದೂರು ನೀಡಲಿಲ್ಲ.

Join Whatsapp
Exit mobile version