Home ಟಾಪ್ ಸುದ್ದಿಗಳು ಎಸ್ ಎಸ್ ಎಲ್ ಸಿ ಮರು ಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕೊಡಗಿನ ವಿದ್ಯಾರ್ಥಿನಿ

ಎಸ್ ಎಸ್ ಎಲ್ ಸಿ ಮರು ಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕೊಡಗಿನ ವಿದ್ಯಾರ್ಥಿನಿ

ಕೊಡಗು: ಇತ್ತೀಚಿಗೆ ಹೊರ ಬಂದಿದ್ದ 10ನೇ ತರಗತಿ ಪರೀಕ್ಷೆಯ ಫಲಿತಾಂಶದಲ್ಲಿ ಕಡಿಮೆ ಅಂಕ ಪಡೆದು ಪಾಸ್ ಆಗಿದ್ದ ಕೊಡಗಿನ ವಿದ್ಯಾರ್ಥಿನಿಯೊಬ್ಬರು ಮರು ಮೌಲ್ಯ ಮಾಪನದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಶನಿವಾರಸಂತೆ ಸೇಕ್ರೆಡ್ ಹಾರ್ಟ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿ ಪೂರ್ವಿ ಜಗದೀಶ್ ಎಸ್. ಮರುಮೌಲ್ಯ ಮಾಪನದಲ್ಲಿ 625 ಕ್ಕೆ 625 ಅಂಕಗಳಿಸಿದ್ದಾರೆ. ಈ ಮೂಲಕ ರಾಜ್ಯಕ್ಕೆ ಹಾಗೂ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಕೀರ್ತಿ ತಂದಿದ್ದಾರೆ. ಶನಿವಾರಸಂತೆ ನಿವಾಸಿ ವಕೀಲರಾದ ಎಸ್. ವಿ. ಜಗದೀಶ್ ಹಾಗೂ ಉಪನ್ಯಾಸಕರಾದ ರಾಗವಿ ಎಚ್. ಪಿ. ಎಂಬವರ ಪುತ್ರಿ ಪೂರ್ವಿ ಜಗದೀಶ್ ಅವರಿಗೆ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ.

Join Whatsapp
Exit mobile version