Home ಕರಾವಳಿ ಕಾಲ್ನಡಿಗೆಯಲ್ಲಿ ಹಜ್ ಗೆ ತೆರಳುತ್ತಿರುವ ಶಿಹಾಬ್ ಚೊಟ್ಟೂರು ಇಂದು ಮಧ್ಯಾಹ್ನ ದ.ಕ.ಜಿಲ್ಲೆಗೆ ಪ್ರವೇಶ

ಕಾಲ್ನಡಿಗೆಯಲ್ಲಿ ಹಜ್ ಗೆ ತೆರಳುತ್ತಿರುವ ಶಿಹಾಬ್ ಚೊಟ್ಟೂರು ಇಂದು ಮಧ್ಯಾಹ್ನ ದ.ಕ.ಜಿಲ್ಲೆಗೆ ಪ್ರವೇಶ

ಮಂಗಳೂರು: ಕೇರಳದ ಮಲಪ್ಪುರಂ ಜಿಲ್ಲೆಯ ಶಿಹಾಬ್ ಚೊಟ್ಟುರು ಕಾಲ್ನಡಿಗೆಯ ಮೂಲಕ ಹಜ್ ಯಾತ್ರೆಗೆ ಹೊರಟಿದ್ದು, ಗುರುವಾರ ಮಧ್ಯಾಹ್ನ ದ.ಕ. ಜಿಲ್ಲೆಗೆ ತಲುಪಲಿದ್ದಾರೆ.

ಶಿಹಾಬ್ ಚೊಟ್ಟುರು ತಮ್ಮ 8600 ಕ್ಕೂ ಹೆಚ್ಚಿನ ಕಿಲೋ ಮೀಟರ್ ಕ್ರಮಿಸುವ ಮತ್ತು 9 ತಿಂಗಳ ಅವಧಿಯ ಕಾಲ್ನಡಿಗೆ ಯಾತ್ರೆ ಯನ್ನು ಮಲಪ್ಪುರಂನಿಂದ ಪ್ರಾರಂಭಿಸಿ ಕರ್ನಾಟಕ ರಾಜ್ಯ ಪ್ರವೇಶಿಸುವ ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ ಗಡಿಯಲ್ಲಿ ಅವರನ್ನು ಸ್ವಾಗತಿಸಲಾಗುವುದು ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ತಿಳಿಸಿದ್ದಾರೆ.

ಜೂನ್ 9ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ ತಲಪಾಡಿ ಗಡಿಯ ಮೂಲಕ ರಾಜ್ಯ ಪ್ರವೇಶಿಸಿ ಕೆ.ಸಿ.ರೋಡು ಮಸೀದಿಯಲ್ಲಿ ಮಧ್ಯಾಹ್ನದ ಊಟದ ಬಳಿಕ ಅಲ್ಪ ವಿಶ್ರಾಂತಿ ನಂತರ ಕಾಲ್ನಡಿಗೆ ಯಾತ್ರೆಯನ್ನು ಮಂಗಳೂರು ಮೂಲಕ ಮುಂದುವರಿಸಲಿದ್ದಾರೆ. ರಾತ್ರಿ 7 ಗಂಟೆ ಸುಮಾರಿಗೆ ಮಂಗಳೂರು ಪಂಪ್ ವೆಲ್ ಮಸ್ಜಿದ್ ತಾಖ್ವಾ ದಲ್ಲಿ ರಾತ್ರಿ ವಿಶ್ರಾಂತಿ ಪಡೆದು ಶುಕ್ರವಾರ ಉಡುಪಿ ಕಡೆ ಮುಂದುವರೆಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version