Home ಟಾಪ್ ಸುದ್ದಿಗಳು ರಾಮನವಮಿ ಶೋಭಾಯಾತ್ರೆಯ ವೇಳೆ ದೇಶದ ಹಲವೆಡೆ ಮಸೀದಿ, ದರ್ಗಾಗಳ ಮೇಲೆ ಕಲ್ಲು ತೂರಾಟ

ರಾಮನವಮಿ ಶೋಭಾಯಾತ್ರೆಯ ವೇಳೆ ದೇಶದ ಹಲವೆಡೆ ಮಸೀದಿ, ದರ್ಗಾಗಳ ಮೇಲೆ ಕಲ್ಲು ತೂರಾಟ

►ಮಸೀದಿಗಳ ಮುಂದೆ ಉದ್ರೇಕಕಾರಿ ಭಾಷಣ ಮಾಡಿದ ಸಂಘಪರಿವಾರದ ನಾಯಕರು


ಹೈದರಾಬಾದ್: ರಾಮನವಮಿ ಶೋಭಾಯಾತ್ರೆಯ ಸಂದರ್ಭದಲ್ಲಿ ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮಬಂಗಾಳ, ಕರ್ನಾಟಕ ಸೇರಿದಂತೆ ರಾಜ್ಯದ ಹಲವೆಡೆ ಸಂಘಪರಿವಾರದ ಕಾರ್ಯಕರ್ತರು ಮಸೀದಿ, ದರ್ಗಾಗಳ ಮುಂದೆ ಮೆರವಣಿಗೆ ನೆಪದಲ್ಲಿ ದಾಂಧಲೆವೆಬ್ಬಿಸಿ ಉದ್ರೇಕಕಾರಿ ಘೋಷಣೆ ಕೂಗಿದ ಘಟನೆಗಳು ನಡೆದ ಬಗ್ಗೆ ವರದಿಯಾಗಿವೆ.


ಕಳೆದ 24 ಗಂಟೆಗಳಲ್ಲಿ ಶೋಭಾ ಯಾತ್ರೆಯ ಹೆಸರಿನಲ್ಲಿ ಮುಸ್ಲಿಂ ವಿರೋಧಿ ಹಿಂಸಾಚಾರ ನಡೆದಿದೆ. ಈ ಹಿಂದೆ ನಡೆಯುತ್ತಿದ್ದ ಸಣ್ಣ ಘಟನೆಗಳು ಈಗ ಮುಸ್ಲಿಮರ ವಿರುದ್ಧ ಗಣನೀಯ ಪ್ರಮಾಣದ ಹಿಂಸಾಚಾರವಾಗಿ ಮಾರ್ಪಟ್ಟಿವೆ.


ಹಿಂದೂ ಬಲಪಂಥೀಯ ನಾಯಕ ಟಿ ರಾಜಾ ಸಿಂಗ್ ತೆಲಂಗಾಣದ ಹೈದರಾಬಾದ್’ನಲ್ಲಿ ಮುಸ್ಲಿಮರ ವಿರುದ್ಧ ಮಸೀದಿಯೊಂದರ ಮುಂದೆಯೇ ಅವಹೇಳನಕಾರಿಯಾಗಿ ಮಾತನಾಡಿರುವ ವೀಡಿಯೋ ವೈರಲ್ ಆಗಿದೆ.


ಮುಂಬೈನಲ್ಲಿ ಸಂಘಪರಿವಾರದ ಕಾರ್ಯಕರ್ತರು ಇಲ್ಲಿನ ಪ್ರಸಿದ್ಧ ದರ್ಗಾ ಆವರಣಕ್ಕೆ ಪ್ರವೇಶಿಸಿ “ಜೈ ಶ್ರೀ ರಾಮ್” ಘೋಷಣೆ ಕೂಗಿ ದಾಂಧಲೆ ವೆಬ್ಬಿಸಿದ್ದಾರೆ.
ಇಲ್ಲಿನ ಪ್ರಸಿದ್ಧ ದರ್ಗಾ ಹಾಜಿ ಅಬ್ದುಲ್ ರಹೀಮ್ ಮಲಾಂಗ್ ಷಾ ಆವರಣಕ್ಕೆ ನುಗ್ಗಿದ ಸಂಘಪರಿವಾರದ ಕಾರ್ಯಕರ್ತರು “ಜೈ ಶ್ರೀ ರಾಮ್” ಘೋಷಣೆಗಳನ್ನು ಕೂಗಿದರು. ಬಳಿಕ ಪೊಲೀಸರ ಸಮ್ಮುಖದಲ್ಲಿ ದರ್ಗಾ ಆವರಣದಲ್ಲಿ ಕೇಸರಿ ಬಾವುಟವನ್ನು ಪ್ರದರ್ಶಿಸಿ ದಾಂಧಲೆ ವೆಬ್ಬಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಜಮ್ಮು ಕಾಶ್ಮೀರದಲ್ಲಿ ನಡೆದ ರಾಮ ನವಮಿ ಜಾಥಾದಲ್ಲಿ ಬಜರಂಗದ ದಳದವರು, ನಾವು ಭಾರತವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ, ಭಾರತ ಹಿಂದೂ ರಾಷ್ಟ್ರ ಎಂಬ ಘೋಷಣೆ ಕೂಗಿದ್ದಾರೆ.
ಮುಂಬೈನ ಮಲಾಡ್’ನಲ್ಲಿ ರಾಮನವಮಿ ಜಾಥಾ ಸಂದರ್ಭದಲ್ಲಿ ಸಂಘಪರಿವಾರದ ಕಾರ್ಯಕರ್ತರು ಮಾಲ್ವಾನಿಯ ಮಸೀದಿಯ ಹೊರಗೆ ನಿಂತು ಪ್ರಚೋದನಕಾರಿ ಘೋಷಣೆಗಳನ್ನು ಕೂಗಿರುವ ಘಟನೆ ನಡೆದಿದೆ. ಪೊಲೀಸರು ಲಾಠಿ ಪ್ರಹಾರ ನಡೆಸಿ, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.


ಪಶ್ಚಿಮ ಬಂಗಾಳದ ಹೌರಾದ ಫೈಝಲ್ ಬಝಾರ್’ನ ಜಿಟಿ ರೋಡ್ ಶಿಬ್’ಪುರ್ ಎಂಬಲ್ಲಿ ಸಂಘಪರಿವಾರದ ಗೂಂಡಾಗಳು ಮುಸ್ಲಿಮರ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ.

ರಾಜಸ್ತಾನದ ಗಂಗಾನಗರದ ಬೀಂಜಬಯಾಲ್ ಎಂಬಲ್ಲಿ ಮಸೀದಿಯೊಂದರ ಮೇಲೆ ಸಂಘಪರಿವಾರದ ಗೂಂಡಾಗಳು ಕೇಸರಿ ಧ್ವಜ ಹಾರಿಸಿರುವ ಘಟನೆ ನಡೆದಿದೆ.


ಮಧ್ಯಪ್ರದೇಶದ ಖಾರ್ಗೋನ್ ನಲ್ಲಿ ಕಳೆದ ವರ್ಷ ನಡೆದ ಹಿಂಸಾಚಾರದ ಘಟನೆಗಳ ಹೊರತಾಗಿಯೂ ಈ ವರ್ಷವೂ ಸಂಘಪರಿವಾರದ ಕಾರ್ಯಕರ್ತರು ಹಿಂಸಾಚಾರ ನಡೆಸಲು ಪ್ರಯತ್ನ ನಡೆಸಿದ್ದಾರೆ. ಇಲ್ಲಿನ ಹಜರತ್ ಕಾಲೇ ಖಾನ್ ದರ್ಗಾದಲ್ಲಿ ರಾಮನವಮಿಯ ಮೆರವಣಿಗೆಯಲ್ಲಿ ಹಿಂದುತ್ವ ಗೂಂಡಾಗಳು ಹಸಿರು ಧ್ವಜವನ್ನು ತೆಗೆದು ಕೇಸರಿ ಧ್ವಜವನ್ನು ಹಾರಿಸಿ, ಕೋಮು ವೈಷಮ್ಯ ಸೃಷ್ಟಿಸಿದ್ದಾರೆ.
ಗುಜರಾತ್’ನ ವಡೋದರದಲ್ಲಿ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡವರು ಮಸೀದಿಯೊಂದರ ಮೇಲೆ ಕಲ್ಲು ತೂರಾಟ ನಡೆಸಿರುವ ವೀಡಿಯೋ ವೈರಲ್ ಆಗಿದೆ. ಸಂಘಪರಿವಾರದ ಈ ಹಿಂಸಾಚಾರ ಬಹುತೇಕ ಪೊಲೀಸರ ಸಮ್ಮುಖದಲ್ಲೇ ನಡೆದಿದೆ.


ಈ ಮಧ್ಯೆ ರಾಜಸ್ತಾನದ ಭಾರತ್’ಪುರ ಜಿಲ್ಲೆಯ ಮೇವತ್, ಸಿಕ್ರಿ ಮತ್ತಿತರ ಕಡೆಗಳಲ್ಲಿ ರಾಮನವಮಿ ಜಾಥಾ ಹೋಗುವಾಗ ಮುಸ್ಲಿಮರು ಪುಷ್ಪಾರ್ಚನೆ ಗೈದ ಪ್ರಸಂಗವೂ ನಡೆದಿದೆ.

https://twitter.com/meerfaisal01/status/1641560200716099584?s=20
Join Whatsapp
Exit mobile version