ಮುಂಬೈ: ಸಂಘಪರಿವಾರದ ಕಾರ್ಯಕರ್ತರು ಇಲ್ಲಿನ ಪ್ರಸಿದ್ಧ ದರ್ಗಾ ಆವರಣಕ್ಕೆ ಪ್ರವೇಶಿಸಿ “ಜೈ ಶ್ರೀ ರಾಮ್” ಘೋಷಣೆ ಕೂಗಿ ದಾಂಧಲೆ ವೆಬ್ಬಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.
ಇಲ್ಲಿನ ಪ್ರಸಿದ್ಧ ದರ್ಗಾ ಹಾಜಿ ಅಬ್ದುಲ್ ರಹೀಮ್ ಮಲಾಂಗ್ ಷಾ ಆವರಣಕ್ಕೆ ನುಗ್ಗಿದ ಸಂಘಪರಿವಾರದ ಕಾರ್ಯಕರ್ತರು “ಜೈ ಶ್ರೀ ರಾಮ್” ಘೋಷಣೆಗಳನ್ನು ಕೂಗಿದರು. ಬಳಿಕ ಪೊಲೀಸರ ಸಮ್ಮುಖದಲ್ಲಿ ದರ್ಗಾ ಆವರಣದಲ್ಲಿ ಕೇಸರಿ ಬಾವುಟವನ್ನು ಪ್ರದರ್ಶಿಸಿ ದಾಂಧಲೆ ವೆಬ್ಬಿಸಿದ್ದಾರೆ.
ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.