ಮಡಿಕೇರಿ: ಕಂಡಕರೆ ಗಾಂಧಿ ಯುವಕ ಸಂಘದ ವತಿಯಿಂದ ಮೊದಲ ವರ್ಷದ ರಾಜ್ಯ ಮಟ್ಟದ ಮುಕ್ತ ಸೂಪರ್ ಕಾಲ್ಚೆಂಡು ಪಂದ್ಯಾವಳಿಯನ್ನು ಇದೇ ಮಾರ್ಚ್ 1 ಮತ್ತು 2 ರಂದು ಚೆಟ್ಟಳ್ಳಿಯ ಜಿ.ಎಂಪಿ ಶಾಲಾ ಮೈದಾನದಲ್ಲಿ ನಡೆಸಲು ತೀರ್ಮಾನಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಸಂಘದ ಕ್ರೀಡಾ ಉಸ್ತುವಾರಿ ಪಿ.ಎಂ. ಅಜಿನಾನ್, ಮೊದಲು ನೋಂದಣಿ ಮಾಡುವ 30 ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಮೊದಲ ಬಹುಮಾನ ರೂಪಾಯಿ 15.555 ಹಾಗೂ ಆಕರ್ಷಕ ಟ್ರೋಫಿ ದ್ವಿತೀಯ ಬಹುಮಾನ ರೂ.11,111 ಆಕರ್ಷಕ ಟ್ರೋಫಿ ಹಾಗೂ ವೈಯುಕ್ತಿಕ ಬಹುಮಾನಗಳನ್ನು ನೀಡಲಿದ್ದೇವೆ ಎಂದು ತಿಳಿಸಿದರು.
ಮೈದಾನ ಶುಲ್ಕ 2000ರೂಪಾಯಿ ನಿಗದಿಪಡಿಸಿದ್ದು, ತಂಡವನ್ನು ನೋಂದಣಿ ಮಾಡಲು ಮುಂಗಡವಾಗಿ ರೂಪಾಯಿ 1000 ಪಾವತಿಸಬೇಕಾಗಿದೆ.