ಮಡಿಕೇರಿ: ಕೊಡಗಿನ ಹೊದ್ದೂರು ಗ್ರಾಮ ಪಂಚಾಯತಿಯ ಅಭಿವೃದ್ದಿ ಅಧಿಕಾರಿ ಎ.ಎ. ಅಬ್ದುಲ್ಲಾ ಸರ್ವೋತ್ತಮ ಸೇವಾ ಪುರಸ್ಕಾರ”ಕ್ಕೆ ಭಾಜನರಾಗಿದ್ದಾರೆ.
ಅತ್ಯುತ್ತಮ ಸೇವೆಗೈದ ಸರಕಾರಿ ನೌಕರರಿಗೆ ರಾಜ್ಯ ಸರಕಾರ ನೀಡುವ “ಸರ್ವೋತ್ತಮ ಸೇವಾ ಪುರಸ್ಕಾರ”ವನ್ನು ಸರಕಾರ ಪ್ರಕಟಿಸಿದೆ. 2022 ನೆ ಸಾಲಿನಲ್ಲಿ 30 ಜನರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಯು 50 ಸಾವಿರ ರೂ. ಒಳಗೊಂಡಿದೆ.
ಈ ಹಿಂದೆ ಮಾಲ್ದಾರೆ, ಪಾಲಿಬೆಟ್ಟ ಮತ್ತು ಪೊನ್ನಂಪೇಟೆ ಗ್ರಾಮ ಪಂಚಾಯತಿಗಳಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಇವರು ಪ್ರಸ್ತುತ ಹೊದ್ದೂರು ಗ್ರಾಮ ಪಂಚಾಯತಿ ಪಿಡಿಓ ಆಗಿದ್ದಾರೆ.
ಪಾಲಿಬೆಟ್ಟ ಗ್ರಾಮ ಪಂಚಾಯತಿಯಲ್ಲಿ 7 ವರ್ಷ ಸೇವೆ ಸಲ್ಲಿಸಿದ್ದು, ಈ ಅವಧಿಯಲ್ಲಿ 1 ರಾಷ್ಟ್ರ ಪುರಸ್ಕಾರ, 6 ರಾಜ್ಯ ಪುರಸ್ಕಾರ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಹಲವು ಪ್ರಶಸ್ತಿಗಳನ್ನು ಪಂಚಾಯತಿ ಪಡೆದಿದೆ. ಹೊದ್ದೂರು ಗ್ರಾಮ ಪಂಚಾಯತಿ ಕಳೆದ ಸಾಲಿನ ರಾಜ್ಯ ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಕೋವಿಡ್ ನಿರ್ವಹಣೆಯಲ್ಲಿ ರಾಷ್ಟ್ರಮಟ್ಟದ ಮನ್ನಣೆಗೆ ಪಾತ್ರವಾಗಿತ್ತು.
ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿಯ ಫಾತಿಮಾ ಹಾಗೂ ದಿ. ಆಲಿ ಕುಟ್ಟಿ ಹಾಜಿ ದಂಪತಿ ಪುತ್ರನಾಗಿದ್ದಾರೆ.