Home ಟಾಪ್ ಸುದ್ದಿಗಳು ಮುಮ್ತಾಝ್ ಅಲಿ ಪ್ರಕರಣ: ಪೊಲೀಸ್ ಆಯುಕ್ತರನ್ನು ಭೇಟಿಯಾದ SSF, SYS ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್...

ಮುಮ್ತಾಝ್ ಅಲಿ ಪ್ರಕರಣ: ಪೊಲೀಸ್ ಆಯುಕ್ತರನ್ನು ಭೇಟಿಯಾದ SSF, SYS ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ನಿಯೋಗ

ಮಂಗಳೂರು: ದ.ಕ.ಜಿಲ್ಲೆಯ ಮುಸ್ಲಿಂ ಸಮುದಾಯದ ನಾಯಕರಾಗಿದ್ದ ಮುಮ್ತಾಝ್ ಅಲಿಯ ಮರಣ ಪ್ರಕರಣಕ್ಕೆ ಸಂಬಂಧಿ ಸಿದಂತೆ ನಿಷ್ಪಕ್ಷಪಾತ ತನಿಖೆ ನಡೆಸಲು ಎಸ್ ವೈಎಸ್, ಎಸೆಸ್ಸೆಫ್, ಕರ್ನಾಟಕ ಮುಸ್ಲಿಂ ಜಮಾಅತ್ ನಾಯಕರ ನಿಯೋಗವು ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.


ಕೃತ್ಯಕ್ಕೆ ಕಾರಣರಾದ ಎಲ್ಲಾ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ತನಿಖೆಯನ್ನು ಇನ್ನಷ್ಟು ಚುರುಕು ಗೊಳಿಸಿ ಕೃತ್ಯದ ಹಿಂದಿರುವ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು. ಮುಂದೆ ಇಂತಹ ಘಟನೆಗಳು ನಡೆಯದಂತೆ ಮತ್ತು ಯಾವುದೇ ಪ್ರಭಾವಕ್ಕೂ ಮಣಿಯದೆ ಆರೋಪಿಗಳಿಗೆ ಗರಿಷ್ಟ ಪ್ರಮಾಣದ ಶಿಕ್ಷೆಯನ್ನು ನೀಡಬೇಕು ಎಂದು ನಿಯೋಗ ಒತ್ತಾಯಿಸಿದೆ.


ಈ ಸಂದರ್ಭ ಕೃಷ್ಣಾಪುರ ಸರ್ಕಲ್ ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಮುಹಮ್ಮದ್ ಅಲಿ, ಕೃಷ್ಣಾಪುರ ಸೆಕ್ಟರ್ ಎಸೆಸ್ಸೆಫ್ ಅಧ್ಯಕ್ಷ ನೌಫಲ್ ಶಾ, ಪ್ರಧಾನ ಕಾರ್ಯದರ್ಶಿ ಶಫೀಕ್ ಸುರತ್ಕಲ್, ಸುರತ್ಕಲ್ ಡಿವಿಷನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಫ್ರೀದ್, ಕೃಷ್ಣಾಪುರ ಯುನಿಟ್ ಕರ್ನಾಟಕ ಮುಸ್ಲಿಂ ಜಮಾಅತ್ ಫೈನಾನ್ಸ್ ಕಾರ್ಯದರ್ಶಿ ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು.

Join Whatsapp
Exit mobile version