Home ಟಾಪ್ ಸುದ್ದಿಗಳು ಬಾಬಾ ಸಿದ್ದಿಕಿ ಹತ್ಯೆ ಬೆನ್ನಲ್ಲೇ ಸಲ್ಮಾನ್ ಖಾನ್ ಗೆ ಹೆಚ್ಚುವರಿ ಭದ್ರತೆ

ಬಾಬಾ ಸಿದ್ದಿಕಿ ಹತ್ಯೆ ಬೆನ್ನಲ್ಲೇ ಸಲ್ಮಾನ್ ಖಾನ್ ಗೆ ಹೆಚ್ಚುವರಿ ಭದ್ರತೆ

ಮುಂಬಯಿ: ನಟ ಸಲ್ಮಾನ್ ಖಾನ್ ಅವರ ಆಪ್ತ ಸ್ನೇಹಿತ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಹತ್ಯೆಯ ಬೆನ್ನಲ್ಲೇ ಇದೀಗ ನಟ ಸಲ್ಮಾನ್ ಖಾನ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದರೊಂದಿಗೆ ಬಾಲಿವುಡ್ ತಾರೆಯರ ಸುರಕ್ಷತೆಯನ್ನು ಮುಂಬೈ ಪೊಲೀಸರು ಕಟ್ಟುನಿಟ್ಟಾದ ಕಣ್ಗಾವಲಿನಲ್ಲಿಟ್ಟಿದ್ದಾರೆ.

ಜೀವ ಬೆದರಿಕೆ ಹಿನ್ನೆಲೆಯಲ್ಲಿ ನಟನಿಗೆ ವೈ ಪ್ಲಸ್ ಭದ್ರತೆಯನ್ನು ಒದಗಿಸಲಾಗಿದ್ದು ಪೊಲೀಸ್ ಬೆಂಗಾವಲು ವಾಹನದ ಜೊತೆಗೆ ಶಸ್ತ್ರಾಸ್ತ್ರಗಳನ್ನು ಬಳಸಲು ತರಬೇತಿ ಪಡೆದ ಕಾನ್ಸ್‌ಟೇಬಲ್ ಅವರ ಜೊತೆಯಲ್ಲಿರಲಿದ್ದಾರೆ ಎಂದು ಮಾಹಿತಿ ನೀಡಿದೆ.

ಬಾಬಾ ಸಿದ್ದಿಕಿ ಅವರ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದ್ದು ಇದರ ಬೆನ್ನಲೇ ನಟ ಸಲ್ಮಾನ್ ಖಾನ್ ಅವರಿಗೂ ಈ ಹಿಂದೆ ಹಲವಾರು ಬಾರಿ ಜೀವ ಬೆದರಿಕೆ ಕೂಡ ಬಂದಿತ್ತು. ಈ ಎಲ್ಲ ಕಾರಣಕ್ಕೆ ಸಂಬಂಧಿಸಿ ನಟನಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ಹೇಳಲಾಗಿದೆ.

Join Whatsapp
Exit mobile version