Home ಟಾಪ್ ಸುದ್ದಿಗಳು ಶೃಂಗೇರಿ: ಚಿರತೆ ಒಡಾಟದಿಂದ ಚಿಂತಾಕ್ರಾಂತರಾದ ಗ್ರಾಮಸ್ಥರು

ಶೃಂಗೇರಿ: ಚಿರತೆ ಒಡಾಟದಿಂದ ಚಿಂತಾಕ್ರಾಂತರಾದ ಗ್ರಾಮಸ್ಥರು

ಚಿಕ್ಕಮಗಳೂರು: ಶೃಂಗೇರಿ ಹೊರವಲಯದ ನೆಮ್ಮಾರಿನಲ್ಲಿ ಚಿರತೆ ಓಡಾಟ ಕಂಡು ಬಂದಿದ್ದು ಸ್ಥಳೀಯರು ತೀವ್ರ ಆತಂಕಕ್ಕೆ ಒಳಗಾಗಿದ್ಧಾರೆ.


ನೆಮ್ಮಾರು ಮಾಣಿಬೈಲು ಸೇತುವೆ ಬಳಿ ಕೆಲ ದಿನಗಳಿಂದ ಚಿರತೆ ಓಡಾಡುತ್ತಿದೆ ಎಂಬ ಸುದ್ದಿ ಕೇಳಿ ಬಂದಿತ್ತು. ಹಲವರಿಗೆ ಚಿರತೆ ಕಂಡಿದ್ದರೆ, ಕೆಲವರು ಚಿರತೆಯ ಹೆಜ್ಜೆಯನ್ನು ಹೋಲುವ ಗುರುತನ್ನು ಕಂಡು ಭಯಭೀತರಾಗಿದ್ದಾರೆ.


ಗ್ರಾಮೀಣ ಪ್ರದೇಶವಾದ್ದರಿಂದ ಮನೆಗಳ ಮಧ್ಯೆ ಕಿ.ಮೀ ಗಳ ಅಂತರವಿದ್ದು, ಕೃಷಿ ಜೀವನ ಅವಲಂಬಿಸಿ ತೋಟ ಗದ್ದೆಗಳಲ್ಲಿ ಕೆಲಸ ಮಾಡುವ ಜನರು ಚಿರತೆ ಓಡಾಟದಿಂದ ಕಂಗಾಲಾಗಿದ್ಧಾರೆ.


ರಾತ್ರಿಯ ವೇಳೆಯಲ್ಲಿ ರಸ್ತೆಯ ಅಕ್ಕ ಪಕ್ಕದಲ್ಲಿ ಚಿರತೆಯ ಓಡಾಟವನ್ನು ಸ್ಥಳೀಯರು ನೋಡಿದ್ದಾರೆ. ಈ ಭಾಗದಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿದ್ದು ಪ್ರವಾಸಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಇದೇ ಮಾರ್ಗದಲ್ಲಿ ಓಡಾಡುವುದರಿಂದ ಚಿರತೆ ದಾಳಿ ನಡೆಸಿದ್ದೇ ಆದಲ್ಲಿ ತೀವ್ರತರಹದ ಸಮಸ್ಯೆಗಳು ಎದುರಾಗಲಿದೆ. ಸಮಸ್ಯೆ ವ್ಯಾಪಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯುವ ಕೆಲಸ ಮಾಡಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Join Whatsapp
Exit mobile version