Home ಟಾಪ್ ಸುದ್ದಿಗಳು ಮತ್ತೆ ಬೊಂಗೈಗಾಂವ್ ಜಿಲ್ಲೆಯ ಮದರಸಾವನ್ನು ಧ್ವಂಸಗೊಳಿಸಿದ ಅಸ್ಸಾಂ ಸರ್ಕಾರ

ಮತ್ತೆ ಬೊಂಗೈಗಾಂವ್ ಜಿಲ್ಲೆಯ ಮದರಸಾವನ್ನು ಧ್ವಂಸಗೊಳಿಸಿದ ಅಸ್ಸಾಂ ಸರ್ಕಾರ

ಬೊಂಗೈಗಾಂವ್ (ಅಸ್ಸಾಂ): ಅಸ್ಸಾಂನ ಬೊಂಗೈಗಾಂವ್ ಜಿಲ್ಲೆಯ ಮದರಸಾವನ್ನು ಉಗ್ರ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ಬುಧವಾರ ನೆಲಸಮಗೊಳಿಸಿದ್ದಾರೆ.

ಜೋಗಿಘೋಪಾ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ಕಬೈಟರಿ ಪಾರ್ಟ್-4 ಗ್ರಾಮದಲ್ಲಿರುವ ಮರ್ಕಝುಲ್ ಮಆರೀಫ್ ಕ್ವಾರಿಯಾನ ಮದರಸಾವನ್ನು ಬುಲ್ಡೋಜರ್ ಬಳಸಿ ನೆಲಸಮಗೊಳಿಸುತ್ತಿರು ವೀಡಿಯೋ ವೈರಲ್ ಆಗಿದೆ.

ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಇಮಾಮ್ ಮತ್ತು ಮದರಸಾ ಶಿಕ್ಷಕರು ಸೇರಿದಂತೆ 37 ಜನರನ್ನು ಬಂಧಿಸಿದ ನಂತರ ಅಸ್ಸಾಂ ಸರ್ಕಾರವು ಧ್ವಂಸಗೊಳಿಸಿದ ಮೂರನೇ ಮದರಸಾ ಇದಾಗಿದೆ.

Join Whatsapp
Exit mobile version