Home ಟಾಪ್ ಸುದ್ದಿಗಳು ಶೃಂಗೇರಿ: ತಾಲೂಕು ಮಟ್ಟದ ಕ್ರೀಡಾಕೂಟ; ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ಮೇಲುಗೈ

ಶೃಂಗೇರಿ: ತಾಲೂಕು ಮಟ್ಟದ ಕ್ರೀಡಾಕೂಟ; ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ಮೇಲುಗೈ

ಚಿಕ್ಕಮಗಳೂರು: ಶೃಂಗೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಇತ್ತೀಚೆಗೆ ನಡೆದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆಗೈಯ್ಯುವ ಮೂಲಕ ಸಮಗ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.
ಕಾಲೇಜಿನ ವಿದ್ಯಾರ್ಥಿನಿ ಮಂದಾರ ವೈಯಕ್ತಿಕ ಪ್ರಶಸ್ತಿಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ.

ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಚಾರ್ಯರು ವಿಜೇತ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಗೌರವಿಸಿ ಈ ರೀತಿಯ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡುವಂತೆ ಪ್ರಶಂಸಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಅರುಣ್ ಕುಮಾರ್ ಹಿರಿಯ ಉಪನ್ಯಾಸಕಿ ಪೂರ್ಣಿಮಾ, ಕ್ರೀಡಾ ಸಂಚಾಲಕರಾದ ಡಾ. ಶ್ರೀಮಂದಾರ, ಕ್ರೀಡಾ ಸಮಿತಿಯ ಸದಸ್ಯರಾದ ಝರೀನಾ, ವಾಸುದೇವ್, ಕಾಲೇಜಿನ ಉಪನ್ಯಾಸಕರಾದ ಮಂಜುನಾಥ್, ಆದರ್ಶ, ಅಮಿತಾ, ಸ್ಮಿತಾ ಮತ್ತು ನವ್ಯ ಉಪಸ್ಥಿತರಿದ್ದರು.

Join Whatsapp
Exit mobile version