Home ಟಾಪ್ ಸುದ್ದಿಗಳು ಶ್ರೀರಾಮ ಸೇನೆಯಿಂದ ಶಾಂತಿ ಕದಡುವ ಷಡ್ಯಂತ್ರ: ಅಹಿತಕರ ಘಟನೆ ನಡೆದರೆ ಪೊಲೀಸ್ ಇಲಾಖೆಯೇ ಹೊಣೆ; ಪಾಪ್ಯುಲರ್...

ಶ್ರೀರಾಮ ಸೇನೆಯಿಂದ ಶಾಂತಿ ಕದಡುವ ಷಡ್ಯಂತ್ರ: ಅಹಿತಕರ ಘಟನೆ ನಡೆದರೆ ಪೊಲೀಸ್ ಇಲಾಖೆಯೇ ಹೊಣೆ; ಪಾಪ್ಯುಲರ್ ಫ್ರಂಟ್

ಸಂಘಪರಿವಾರದ ದುಷ್ಕರ್ಮಿಗಳು ರಾಮ ನವಮಿ ಮತ್ತು ಹನುಮ ಜಯಂತಿಯ ವೇಳೆ ಮಸ್ಜಿದ್ ಎದುರು ಡಿ.ಜೆ.ಹಾಕಿ ತಲವಾರು ಝಳಪಿಸಿ, ಮುಸ್ಲಿಮ್ ವಿರೋಧಿ ಘೋಷಣೆ ಕೂಗಿ ಹಿಂಸಾಚಾರ ನಡೆಸಿದ ತಾಜಾ ಘಟನೆ ನಮ್ಮ ಮುಂದಿದೆ. ಈ ಘಟನೆ‌ ಮಾಸುವ ಮುನ್ನವೇ ಶ್ರೀರಾಮ ಸೇನೆಯ ನಾಯಕ ಪ್ರಮೋದ್ ಮುತಾಲಿಕ್ ರಾಜ್ಯಾದ್ಯಂತ ಮಸ್ಜಿದ್ ಗಳ ಎದುರು ಭಜನೆ ನಡೆಸುವ ಬೆದರಿಕೆಯೊಡ್ಡಿದ್ದಾರೆ. ದಿನ ಬೆಳಗಾದರೆ‌ ಕೋಮು ವಿಷ ಕಕ್ಕುವ ಪ್ರಮೋದ್ ಮುತಾಲಿಕ್ ರಂತಹ ಸಮಾಜ ವಿರೋಧಿ ಶಕ್ತಿಗಳು ರಾಜ್ಯವನ್ನು ಸದಾ ಉದ್ವಿಗ್ನತೆಗೆ ತಳ್ಳಲು ಪಿತೂರಿ ನಡೆಸುತ್ತಿದ್ದಾರೆ. ಜನರ ಜ್ವಲಂತ‌ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದ‌ ಮುತಾಲಿಕ್ ಭಾವನಾತ್ಮಕ ವಿಚಾರಗಳನ್ನು ಬಳಸಿಕೊಂಡು ಹಿಂದು-ಮುಸ್ಲಿಮರ ನಡುವೆ ವೈಷಮ್ಯ ಹರಡಲು ಪ್ರಯತ್ನಿಸುತ್ತಿದ್ದಾರೆ. ಹಣಕ್ಕಾಗಿ ಕೋಮು ಗಲಭೆ ನಡೆಸುವ, ಪಾಕ್ ಧ್ವಜ ಹಾರಿಸಿ ಸಾಮರಸ್ಯ ಕೆಡಿಸುವ, ಹುಬ್ಬಳ್ಳಿ ಬಾಂಬ್ ಸ್ಫೋಟ ಆರೋಪಿ ನಾಗರಾಜ ಜಂಬಗಿಯೊಂದಿಗೆ ನಂಟು ಹೊಂದಿದ್ದ, ಶಾಂತಿ ಕದಡಲು ಪ್ರಚೋದನಾಕಾರಿ ಭಾಷಣ ಮಾಡುವ, ಮಹಿಳೆಯರ ಬಗ್ಗೆ ತುಚ್ಛ ಭಾವನೆ ಹೊಂದಿರುವ ಶ್ರೀರಾಮ ಸೇನೆಯ ನಾಯಕ ಪ್ರಮೋದ್ ಮುತಾಲಿಕ್ ನಿಂದ ಈ ರಾಜ್ಯದ ಜನತೆಗೆ ಆಗಬೇಕಾಗಿರುವುದು ಏನೂ ಇಲ್ಲ. ಮುಸ್ಲಿಮರ ಆಝಾನ್ ಅಥವಾ ಹಿಂದುಗಳ ಭಜನೆಗೆ ಈ ವರೆಗೂ ಉಭಯ ಧರ್ಮೀಯರಿಂದ ಯಾವುದೇ ಆಕ್ಷೇಪ ಉಂಟಾಗಿಲ್ಲ. ಜೊತೆಗೆ ಹಿಂದು-ಮುಸ್ಲಿಮರು ಪರಸ್ಪರರ ಧಾರ್ಮಿಕ ಪದ್ಧತಿಗಳನ್ನು ಗೌರವಿಸುತ್ತಾ ಬಂದಿದ್ದಾರೆ. ಇದೀಗ ಅಝಾನ್ ವಿರೋಧಿಸಿ ನಡೆಯುತ್ತಿರುವ ಅಭಿಯಾನವು ಸಮಾಜದಲ್ಲಿ ಒಡಕು ಮೂಡಿಸುವ ಷಡ್ಯಂತ್ರದ ಭಾಗವಾಗಿದೆ. ರಾಜ್ಯವನ್ನು ಕೋಮು ದಳ್ಳುರಿಗೆ ದೂಡುವ ಇಂತಹ ಕೋಮು ವಿಷಜಂತುಗಳಿಗೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು. ಒಂದು ವೇಳೆ ಮಸ್ಜಿದ್ ಎದುರು ಉದ್ವಿಗ್ನತೆ ಸೃಷ್ಟಿಸಿ ಹಿಂಸಾಚಾರದ ಘಟನೆಗಳು ನಡೆದರೆ ಅದರ ಹೊಣೆಯನ್ನು ಪೊಲೀಸ್ ಇಲಾಖೆಯೇ ಹೊತ್ತುಕೊಳ್ಳಬೇಕಾಗುತ್ತದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್ ಎಚ್ಚರಿಸಿದ್ದಾರೆ.

Join Whatsapp
Exit mobile version