Home ಟಾಪ್ ಸುದ್ದಿಗಳು ಪ್ರಕ್ಷುಬ್ದ ಶ್ರೀಲಂಕಾ | ಮಾಜಿ ಪ್ರಧಾನಿ, ಮಿತ್ರಪಕ್ಷದವರು ದೇಶ ತೊರೆಯದಂತೆ ನಿಷೇಧ ಹೇರಿದ ನ್ಯಾಯಾಲಯ

ಪ್ರಕ್ಷುಬ್ದ ಶ್ರೀಲಂಕಾ | ಮಾಜಿ ಪ್ರಧಾನಿ, ಮಿತ್ರಪಕ್ಷದವರು ದೇಶ ತೊರೆಯದಂತೆ ನಿಷೇಧ ಹೇರಿದ ನ್ಯಾಯಾಲಯ

ಕೊಲಂಬೊ: ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಷೆ, ಅವರ ಪುತ್ರ, ರಾಜಕಾರಣಿ ನಮಲ್ ಮತ್ತು 15 ಮಿತ್ರಪಕ್ಷಗಳ ಸದಸ್ಯರಿಗೆ ದೇಶ ತೊರೆಯದಂತೆ ಗುರುವಾರ ನ್ಯಾಯಾಲಯ ನಿಷೇಧ ಹೇರಿದೆ. ಈ ಮೇಲಿನವರು ಸರ್ಕಾರದ ವಿರೋಧಿ ಪ್ರತಿಭಟನಾಕಾರದ ಮೇಲೆ ಹಿಂಸಾಚಾರ ನಡೆಸಿದ ಆರೋಪದಲ್ಲಿ ನ್ಯಾಯಾಲಯ ಈ ಕ್ರಮಕ್ಕೆ ಮುಂದಾಗಿದೆ.

ರಾಜಧಾನಿ ಕೊಲಂಬೊದಲ್ಲಿ ಮ್ಯಾಜಿಸ್ಟ್ರೇಟ್ ಅವರು ಶಾಂತಿಯುತವಾಗಿ ಪತಿಭಟನೆ ನಡೆಸಿದವರ ಮೇಲೆ ಗುಂಪೊಂದು ದಾಳಿ ಮಾಡಿದ ಕುರಿತು ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಇದು ಹಿಂಸಾಚಾರಕ್ಕೆ ಕಾರಣವಾಗಿದೆ ಮತ್ತು ಒಂಬತ್ತು ಜೀವಗಳನ್ನು ಬಲಿ ಪಡೆದಿದೆ.

Join Whatsapp
Exit mobile version