Home ಟಾಪ್ ಸುದ್ದಿಗಳು ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುವುದಿಲ್ಲ ಎಂದ ಫೋರ್ಡ್

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುವುದಿಲ್ಲ ಎಂದ ಫೋರ್ಡ್

ನವದೆಹಲಿ: ಅಮೆರಿಕದ ಪ್ರಸಿದ್ಧ ಕಾರು ತಯಾರಿಕಾ ಕಂಪನಿ ಫೋರ್ಡ್ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುವುದಿಲ್ಲ ಎಂದು ಘೋಷಿಸಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಿ ಜಾಗತಿಕ ಮಾರುಕಟ್ಟೆಗೆ ಕಳುಹಿಸುವುದಿಲ್ಲ ಎಂದು ಫೋರ್ಡ್ ಇಂಡಿಯಾ ಚೆನ್ನೈನಲ್ಲಿರುವ ತಯಾರಿಕಾ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.

ಕೇಂದ್ರ ಸರಕಾರದ ಸಹಾಯಧನದಲ್ಲಿ ಸುಮಾರು 22 ಕಂಪನಿಗಳು ಭಾರತದಲ್ಲಿ ಇವಿ ವಾಹನಗಳನ್ನು ತಯಾರಿಸಲು ಸಮ್ಮತಿಸಿದ್ದವು. ಆದರೆ ಇದೀಗ ಫೋರ್ಡ್ ಕಂಪನಿ ಹಿಂದೆ ಸರಿದಿದೆ. ದೀರ್ಘಾವಧಿಯಲ್ಲಿ ಬಂಡವಾಳ ಹೂಡಿಕೆಗೆ ಇದು ಸೂಕ್ತವಾಗುವುದಿಲ್ಲ ಎಂದು ಕಂಪನಿ ತಿಳಿಸಿದೆ.

ಭಾರತದಲ್ಲಿ ಅನಿವಾರ್ಯ ಕಾರಣಗಳಿಂದ ನಾವು ಜಾಗತಿಕ ಮಾರುಕಟ್ಟೆಗಾಗಿ ಇಲ್ಲಿ ಎಲೆಕ್ಟ್ರಿಕಲ್ ಕಾರುಗಳನ್ನು ತಯಾರಿಸುವುದರಿಂದ ಹಿಂದೆ ಸರಿದಿದ್ದೇವೆ ಎಂದು ಕಂಪೆನಿಯ ಅಧಿಕೃತ ವಕ್ತಾರರು ತಿಳಿಸಿದ್ದಾರೆ.

Join Whatsapp
Exit mobile version