Home ಕರಾವಳಿ ಸುರತ್ಕಲ್ ಬೀಚ್ ಬಳಿ ಕನ್ನಡಿ ಹಾವಿನಂತಿರುವ ಸ್ಪಾಟೆಡ್ ಮೊರೈ ಈಲ್ಸ್ ಮೀನು ಪತ್ತೆ

ಸುರತ್ಕಲ್ ಬೀಚ್ ಬಳಿ ಕನ್ನಡಿ ಹಾವಿನಂತಿರುವ ಸ್ಪಾಟೆಡ್ ಮೊರೈ ಈಲ್ಸ್ ಮೀನು ಪತ್ತೆ

ಮಂಗಳೂರು: ಅಪರೂಪ ಹಾಗೂ ಆಕರ್ಷಣೀಯವಾದ ಸ್ಪಾಟೆಡ್ ಮೊರೈ ಈಲ್ಸ್ ಮೀನು ಸುರತ್ಕಲ್ ಬೀಚ್ ಬಳಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಇದರ ವೈಜ್ಞಾನಿಕ ಹೆಸರು ಜಿಮ್ನೋಥೊರಾಕ್ಸ್ ಮೊರಿಂಗಾ. ತಕ್ಷಣ ನೋಡಲು ಕನ್ನಡಿ ಹಾವಿನಂತೆ ಕಂಡು ಬರುವ ಈ ಮೀನು ಕಪ್ಪು ಚುಕ್ಕೆಗಳಿಂದ ಬಹಳಷ್ಟು ಆಕರ್ಷಣೀಯವಾಗಿದೆ.


ಈ ಮೀನು ಸಾಮಾನ್ಯವಾಗಿ 60 ಸೆ.ಮೀ. ಉದ್ದ ಬೆಳೆಯುತ್ತದೆ. ಗರಿಷ್ಠ 2.51 ಕೆ.ಜಿ. ತೂಗುತ್ತದೆ. ಈ ಮೀನು ಒಂಟಿಯಾಗಿ ವಾಸ ಮಾಡುತ್ತದೆ. ಉಷ್ಣ ವಲಯದ ನೀರಿನಲ್ಲಿ ವಾಸಿಸುವ ಈ ಮೀನುಗಳು ಮೊಟ್ಟೆ ಇಡಲು ವಲಸೆ ಹೋಗುತ್ತದೆ. ಈ ಮೀನು ದ್ವೀಪದ ಬಳಿ ಇರುವ ಹವಳ ದಿಬ್ಬದಂತಹ ಸ್ಥಳಗಳಲ್ಲಿ ವಾಸ ಮಾಡುತ್ತದೆ. ಪ್ರಕ್ಷುಬ್ಧವಾದ ಕಡಲಿನ ಅಲೆಗಳ ಅಬ್ಬರದಿಂದ ತೀರಕ್ಕೆ ಬಂದಿರಬಹುದು ಎಂದು ಮಂಗಳೂರು ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯ ಮಂಗಳೂರು ಪ್ರಾದೇಶಿಕ ಕೇಂದ್ರ ವಿಜ್ಞಾನಿ ರಾಜೇಶ್ ಕೆ.ಎಂ. ತಿಳಿಸಿದ್ದಾರೆ.

Join Whatsapp
Exit mobile version