Home ಟಾಪ್ ಸುದ್ದಿಗಳು ಸರ್ಕಾರಕ್ಕೆ ಖುಷಿಯಾಗುವ ವಿಷಯ ಮಾತಾಡಿ ಮಾರ್ರೆ: ವೇದವ್ಯಾಸ್ ಕಾಮತ್ ಗೆ ಸ್ಪೀಕರ್ ಖಾದರ್ ಸೂಚನೆ

ಸರ್ಕಾರಕ್ಕೆ ಖುಷಿಯಾಗುವ ವಿಷಯ ಮಾತಾಡಿ ಮಾರ್ರೆ: ವೇದವ್ಯಾಸ್ ಕಾಮತ್ ಗೆ ಸ್ಪೀಕರ್ ಖಾದರ್ ಸೂಚನೆ

ಬೆಂಗಳೂರು: ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸಿದರು. ಈ ವೇಳೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಆಡಳಿತ ಪಕ್ಷಕ್ಕೆ ಖುಷಿಯಾಗುವ ವಿಷಯ ಮಾತಾಡಿ, ಬೇಸರ ಆಗುವ ವಿಚಾರ ಮಾತನಾಡಬೇಡಿ ಎಂದು ಸ್ಪೀಕರ್ ಯುಟಿ ಖಾದರ್ ಅವರು ವೇದವ್ಯಾಸ್ ಕಾಮತ್ ಅವರಿಗೆ ಸೂಚಿಸಿದರು.


ವೇದವ್ಯಾಸ್ ಕಾಮತ್ ಅವರು ಬಜೆಟ್ ಮೇಲಿನ ಚರ್ಚೆ ವೇಳೆ ಕೇಂದ್ರ ಸರ್ಕಾರದ ಸಾಧನೆಗಳು ಮತ್ತು ಅಭಿವೃದ್ಧಿ ಕೆಲಸಗಳ ಪಟ್ಟಿ ಹೇಳುತ್ತಾ ಹೋದರು. ಈ ವೇಳೆ ಆಡಳಿತ ಪಕ್ಷದಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಇದಕ್ಕೆ ಪ್ರತಿಯಾಗಿ ವಿಪಕ್ಷ ಬಿಜೆಪಿಯೂ ಕಾಂಗ್ರೆಸ್ ಸದಸ್ಯರನ್ನು ತರಾಟೆಗೆ ತೆಗೆದುಕೊಳ್ಳಲು ಮುಂದಾಯಿತು. ಸದನದಲ್ಲಿ ಗದ್ದಲ ಉಂಟಾಗುತ್ತಿದ್ದಂತೆ ಬೇಗ ಚರ್ಚೆ ಮುಗಿಸಿ ಎಂದು ವೇದವ್ಯಾಸ ಕಾಮತ್ ಗೆ ಸ್ಪೀಕರ್ ಸೂಚಿಸಿದರು. ಈ ವೇಳೆ ಎಲ್ಲಾ ಸದಸ್ಯರು ನಗೆಯಲ್ಲಿ ತೇಲಾಡಿದರು.

Join Whatsapp
Exit mobile version