Home ಟಾಪ್ ಸುದ್ದಿಗಳು ಕಾಂಗ್ರೆಸ್​ನಲ್ಲಿ ಒಡಕೆನ್ನುವುದು ಕೆಲ ಮಾಧ್ಯಮಗಳ ಸೃಷ್ಟಿ: ಸುರ್ಜೆವಾಲ

ಕಾಂಗ್ರೆಸ್​ನಲ್ಲಿ ಒಡಕೆನ್ನುವುದು ಕೆಲ ಮಾಧ್ಯಮಗಳ ಸೃಷ್ಟಿ: ಸುರ್ಜೆವಾಲ

►ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಯಶಸ್ಸಿನಿಂದ ಬಿಜೆಪಿ ಕಂಗಾಲು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಬಿಜೆಪಿಯವರು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಈ ಆರೋಪ ಮಾಡುತ್ತಿದ್ದಾರೆ. ಕೆಲ ಮಾಧ್ಯಮಗಳ ಗುಂಪಿನಿಂದ ಈ ಗೊಂದಲ ಸೃಷ್ಟಿಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ.

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡುತ್ತಾ ಈ ವಿಚಾರವನ್ನು ಪ್ರಸ್ತಾಪಿಸಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ 58 ಸಾವಿರ ಕೋಟಿ ರೂಗಳ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿವೆ. ಇವುಗಳ ಲಾಭ ಜನತೆಗೆ ಸಿಗುತ್ತಿದೆ. ಇವು ದೇಶದ ದೊಡ್ಡ ಯೋಜನೆಗಳೆನಿಸಿವೆ. ಇವುಗಳ ಯಶಸ್ಸಿನಿಂದ ಬಿಜೆಪಿ ಹತಾಶೆಗೊಂಡಿದೆ. ಇದನ್ನು ಮರೆಮಾಚಲು ಕಾಂಗ್ರೆಸ್​ನಲ್ಲಿ ಇಲ್ಲದ ಒಡಕನ್ನು ಸೃಷ್ಟಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ರಣದೀಪ್ ಸುರ್ಜೆವಾಲ ಆರೋಪಿಸಿದ್ದಾರೆ.

ಕರ್ನಾಟಕ ಘಟಕದ ಬಿಜೆಪಿಯಲ್ಲಿ ಬೇರೆ ಬೇರೆ ಬಣಗಳಿವೆ. ಒಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಬಣ ಇದೆ. ಇನ್ನೊಂದೆಡೆ ಬಸನಗೌಡ ಪಾಟೀಲ್ ಯತ್ನಾಳರದ್ದು ಬಣ ಇದೆ. ಮತ್ತೊಂದೆಡೆ ಆರ್ ಅಶೋಕ್ ಅವರ ಬಣ ಇದೆ. ಮಗದೊಂದೆಡೆ ಅಶ್ವತ್ಥ ನಾರಾಯಣ ಅವರ ಬಣ ಇದೆ ಎಂದು ಬಿಜೆಪಿ ವಿರುದ್ಧ ಸುರ್ಜೆವಾಲ ವ್ಯಂಗ್ಯ ಮಾಡಿದ್ದಾರೆ.

Join Whatsapp
Exit mobile version