Home ಟಾಪ್ ಸುದ್ದಿಗಳು ವಿಧಾನ ಪರಿಷತ್ ನಲ್ಲಿ ಧರಣಿ ನಡೆಸಿದ 14 ಮಂದಿ ಕಾಂಗ್ರೆಸ್ ಸದಸ್ಯರನ್ನು ಅಮಾನತುಗೊಳಿಸಿದ ಸಭಾಪತಿ ಹೊರಟ್ಟಿ

ವಿಧಾನ ಪರಿಷತ್ ನಲ್ಲಿ ಧರಣಿ ನಡೆಸಿದ 14 ಮಂದಿ ಕಾಂಗ್ರೆಸ್ ಸದಸ್ಯರನ್ನು ಅಮಾನತುಗೊಳಿಸಿದ ಸಭಾಪತಿ ಹೊರಟ್ಟಿ

ಬೆಳಗಾವಿ: ಸಭಾಪತಿ ಆದೇಶ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ವಿಧಾನ ಪರಿಷತ್ ನ ಸಭಾ ನಾಯಕ ಎಸ್. ಆರ್. ಪಾಟೀಲ್ ಸೇರಿ 14 ಮಂದಿ ಕಾಂಗ್ರೆಸ್ ಸದಸ್ಯರನ್ನು ಸಭಾಪತಿ ಬಸವರಾಜ ಹೊರಟ್ಟಿ ಅಮಾನತುಗೊಳಿಸಿದ್ದಾರೆ.

ಸದನದ ಬಾವಿಗಿಳಿದು ಧರಣಿ ನಡೆಸಿದ ಕಾಂಗ್ರೆಸ್ ನ 14 ಮಂದಿಯನ್ನು ಒಂದು ದಿನ ಮಟ್ಟಿಗೆ ಅಮಾನತುಗೊಳಿಸಲಾಗಿದೆ.

ನಿಯಮ 62ರಡಿ ಚರ್ಚೆಗೆ ಎಸ್. ಆರ್. ಪಾಟೀಲ್ ಒತ್ತಾಯಿಸಿದಾಗ ಸಭಾಪತಿ ಅದಕ್ಕೆ ಅವಕಾಶ ನಿರಾಕರಿಸಿದರು. ಇದನ್ನು ವಿರೋಧಿಸಿ ಎಸ್. ಆರ್. ಪಾಟೀಲ್, ಯು.ಬಿ.ವೆಂಕಟೇಶ್ ಸೇರಿ ಕಾಂಗ್ರೆಸ್ ಸದಸ್ಯರು ಧರಣಿ ನಡೆಸಿದರು. ಇದರಿಂದ ಸಿಟ್ಟಾದ ಹೊರಟ್ಟಿ 14 ಮಂದಿಯನ್ನೂ ಅಮಾನತುಗೊಳಿಸಿದರು.

ಎಸ್.ಆರ್. ಪಾಟೀಲ್, ಪಿ.ಆರ್. ರಮೇಶ್‌, ನಾರಾಯಣಸ್ವಾಮಿ, ಬಿ.ಕೆ. ಹರಿಪ್ರಸಾದ್‌, ಪ್ರತಾಪ್‌ಚಂದ್ರ ಶೆಟ್ಟಿ, ಯು.ಬಿ. ವೆಂಕಟೇಶ್‌, ವೀಣಾ ಅಚ್ಚಯ್ಯ, ಸಿ.ಎಂ. ಇಬ್ರಾಹಿಂ ಸೇರಿದಂತೆ 14 ಕಾಂಗ್ರೆಸ್ ಸದಸ್ಯರ ಅಮಾನತುಗೊಳಿಸಲಾಗಿದೆ

Join Whatsapp
Exit mobile version