ಜಿದ್ದಾ : ಸೌದಿ ಅರೇಬಿಯಾ ತನ್ನೆಲ್ಲಾ ಭೂ, ಜಲ ಹಾಗೂ ವಾಯು ಮಾರ್ಗಗಳ ಸಂಚಾರಗಳನ್ನು ಮೇ 17ರಿಂದ ಪುನರಾರಂಭಿಸಲಿದೆ. ಮೇ 17 ರಂದು ವಿವಿಧ ದೇಶಗಳಿಂದ ಸುಮಾರು 385 ಅಂತರರಾಷ್ಟ್ರೀಯ ವಿಮಾನಗಳು ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳಲ್ಲಿ ಬಂದು ಇಳಿಯಲಿದೆ ಎಂದು ಸೌದಿ ಆಂತರಿಕ ಸಚಿವಾಲಯ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಕೊರೋನಾ ಹರಡುತ್ತಿರುವ ಹಿನ್ನೆಲೆಯಲ್ಲಿ ವಿಮಾನಯಾನವು ಕಟ್ಟುವಿಟ್ಟಿನ ಕೋವಿಡ್ ಮಾರ್ಗಸೂಚಿಯೊಂದಿಗೆ ಪ್ರಾರಂಭವಾಗಲಿದೆ. ಸೌದಿಗೆ ಬರುವ ಎಲ್ಲಾ ವಿದೇಶಿಗರಿಗೂ ಏಳು ದಿನಗಳ ಇನ್ಸ್ಟಿಟ್ಯೂಷನಲ್ ಕ್ವಾರೆಂಟೈನ್ ಕಡ್ಡಾಯ. ಕ್ವಾರೆಂಟೈನ್ ನಿಯಮಗಳನ್ನು ಪಾಲಿಸದ ವಿದೇಶಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದೆಂದು ಸೌದಿ ಆಂತರಿಕ ಸಚಿವಾಲಯ ಎಚ್ಚರಿಸಿದೆ.