Home ಕರಾವಳಿ ಉಪ್ಪಿನಂಗಡಿ : ಕರ್ತವ್ಯ ನಿರತ ಮೆಸ್ಕಾಂ ಪವರ್ ಮ್ಯಾನ್ ವಿದ್ಯುತ್ ತಗುಲಿ ಸಾವು

ಉಪ್ಪಿನಂಗಡಿ : ಕರ್ತವ್ಯ ನಿರತ ಮೆಸ್ಕಾಂ ಪವರ್ ಮ್ಯಾನ್ ವಿದ್ಯುತ್ ತಗುಲಿ ಸಾವು

ಉಪ್ಪಿನಂಗಡಿ : ವಿದ್ಯುತ್ ಕಂಬದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಮೆಸ್ಕಾಂ ಪವರ್ ಮ್ಯಾನ್ ವಿದ್ಯುತ್ ಶಾಕ್ ಗೊಳಗಾಗಿ ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತಪಟ್ಟವರನ್ನು ಕಲ್ಲೇರಿ ಸೆಕ್ಷನ್ ಆಫೀಸಿನ ಮೆಸ್ಕಾಂ ಪವರ್ ಮ್ಯಾನ್ ವಿಕಾಸ್ ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಪಿಂಡಿಕಲ್ಲು ಎಂಬಲ್ಲಿ ಈ ಘಟನೆ ಸಂಭವಿಸಿದೆ ಎಂಬ ಮಾಹಿತಿ ಲಭಿಸಿದೆ. ಕಳೆದ ಎರಡು ದಿನದಿಂದ ಭಾರಿ ಗಾಳಿ ಮಳೆ ಸುರಿದ ಕಾರಣ ವಿದ್ಯುತ್ ಅಡಚಣೆ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜು ಸರಿಪಡಿಸುವ ಸಂದರ್ಭ ಈ ಘಟನೆ ಸಂಭವಿಸಿದ್ದು ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Join Whatsapp
Exit mobile version