Home ಟಾಪ್ ಸುದ್ದಿಗಳು ತ್ರಿವರ್ಣ ಧ್ವಜ ಕಟ್ಟುವ ವೇಳೆ ಜಾರಿ ಬಿದ್ದು ಸಾಫ್ಟ್ ವೇರ್ ಇಂಜಿನಿಯರ್ ಮೃತ್ಯು

ತ್ರಿವರ್ಣ ಧ್ವಜ ಕಟ್ಟುವ ವೇಳೆ ಜಾರಿ ಬಿದ್ದು ಸಾಫ್ಟ್ ವೇರ್ ಇಂಜಿನಿಯರ್ ಮೃತ್ಯು

ಬೆಂಗಳೂರು: ಹರ್ ಘರ್ ತಿರಂಗ ಅಭಿಯಾನದ ಅಂಗವಾಗಿ ತಾವು ವಾಸಿಸುತ್ತಿದ್ದ ಕಟ್ಟಡದ ಎರಡನೇ ಮಹಡಿಯ ಟೆರೇಸ್ ನಲ್ಲಿ ತ್ರಿವರ್ಣ ಧ್ವಜ ಕಟ್ಟುವ ವೇಳೆ ಜಾರಿ ಬಿದ್ದು ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಹೆಣ್ಣೂರಿನಲ್ಲಿ ನಡೆದಿದೆ.

ಮೂಲತಃ ಸುಳ್ಯದವರಾದ ಅರ್ಚಕ ನಾರಾಯಣ ಭಟ್ ಎಂಬವರ ಪುತ್ರ ವಿಶ್ವಾಸ್ ಕುಮಾರ್ (33) ಮೃತ ದುರ್ದೈವಿಯಾಗಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ವಿಶ್ವಾಸ್, ಹೆಣ್ಣೂರು ಎಚ್ ಬಿ ಆರ್ ಲೇಔಟ್ 5ನೇ ಬ್ಲಾಕ್ ನಲ್ಲಿ ಪತ್ನಿ ವೈಶಾಲಿ ಹಾಗೂ ಎರಡು ವರ್ಷದ ಮಗಳು ಮತ್ತು ಪೋಷಕರ ಜತೆ ವಾಸವಿದ್ದರು.

ರವಿವಾರ ಮಧ್ಯಾಹ್ನ 1.45ರ ಸುಮಾರಿಗೆ ವಿಶ್ವಾಸ್ ಟೆರೇಸ್ ನ ಅಡ್ಡಗೋಡೆಯನ್ನು ಏರಿ ಧ್ವಜ ಹಾರಿಸುವ ಸಲುವಾಗಿ ಕೋಲು ಕಟ್ಟಲು ತೆರಳಿದ್ದ ವೇಳೆ ಆಕಸ್ಮಿಕವಾಗಿ ಜಾರಿ ನೆಲಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ.

ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ, ತಲೆಗೆ ಆಗಿದ್ದ ಗಂಭೀರ ಗಾಯದಿಂದಾಗಿ ಅವರು ಮೃತಪಟ್ಟದ್ದಾರೆ ಎಂದು ಪೊಲೀಸರು ಹೇಳಿದ್ದಾರೆ

Join Whatsapp
Exit mobile version