Home ಟಾಪ್ ಸುದ್ದಿಗಳು ಅಮಾನತ್ ಬ್ಯಾಂಕ್ ಚುನಾವಣೆ; ಎಲ್ಲ ಷೇರುದಾರರಿಗೆ ಮತದಾನದ ಅವಕಾಶಕ್ಕೆ ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ ಆಗ್ರಹ

ಅಮಾನತ್ ಬ್ಯಾಂಕ್ ಚುನಾವಣೆ; ಎಲ್ಲ ಷೇರುದಾರರಿಗೆ ಮತದಾನದ ಅವಕಾಶಕ್ಕೆ ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ ಆಗ್ರಹ

ಬೆಂಗಳೂರು: ಅಮಾನತ್ ಬ್ಯಾಂಕ್ ನ ಪದಾಧಿಕಾರಿಗಳ ಚುನಾವಣೆ ಈಗಾಗಲೇ ಘೋಷಣೆಯಾಗಿದ್ದು, ಎಲ್ಲ ಷೇರುದಾರ ಸದಸ್ಯರಿಗೆ ಮತದಾನ ಹಕ್ಕುನ್ನು ನೀಡಬೇಕೆಂದು ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಷೇರುದಾರರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಸಾವಿರ ರೂಪಾಯಿಗಿಂತ ಕಡಿಮೆ ಷೇರು ಹೊಂದಿರುವ ಷೇರುದಾರರಿಗೆ ಮತದಾನ ಹಕ್ಕು ಇಲ್ಲ ಎಂದು ನಿರ್ಣಯ ಕೈಗೊಂಡಿರುವುದು ಸರಿಯಲ್ಲ. ಸುಮಾರು ಅನೇಕ ವರ್ಷಗಳ ಹಿಂದೆ ಒಂದು ಸಾವಿರ ರೂಪಾಯಿಯಿಂದ ಐದುನೂರು ರೂಪಾಯಿವರೆಗೆ ಆಗಿನ ಬೆಲೆಯ ಮೌಲ್ಯದ ಪ್ರಕಾರ ಷೇರು ಹೊಂದಲಾಗಿತ್ತು. ಆಗಿನ ಷೇರು ಠೇವಣಿ ಈಗ ದುಪ್ಪಟ್ಟು ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ಷೇರುದಾರರಿಗೆ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಅಮಾನತ್ ಬ್ಯಾಂಕ್ ನಲ್ಲಿ ಹಾಲಿ ಇರುವ ಹನ್ನೊಂದು ಮಂದಿ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಬಹಿರಂಗವಾಗಿ ಇದುವರಗೆ ಬ್ಯಾಂಕ್ ನಲ್ಲಿ ಏನೆನ್ನೂ ನಡೆದಿದೆ ಎಂಬುದನ್ನು ಮುಕ್ತವಾಗಿ ಷೇರುದಾರರ ಜತೆ ಚರ್ಚೆ ನಡೆಸಲಿ. ಇಲ್ಲವಾದರೆ ಇವರು ಯಾರೂ ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂದರು.

ಅಮಾನತ್ ಬ್ಯಾಂಕ್ ನಲ್ಲಿರುವ ಮುಖ್ಯ ವ್ಯವಸ್ಥಾಪಕರು ಸೇರಿದಂತೆ ಅನೇಕ ಸಿಬ್ಬಂದಿಗಳು ಬಡ ಜನರು ಬ್ಯಾಂಕ್ ನಲ್ಲಿ ಹೂಡಿದ ಹಣವನ್ನು  ರಿಯಲ್ ಎಸ್ಟೇಟ್ ಗೆ ಬಳಸಿಕೊಂಡು ಸಾವಿರಾರು ಕೋಟಿ ಆಸ್ತಿ ಮಾಡಿದ್ದಾರೆ. ಇಂತಹ ಅನೇಕ ಹಗರಣಗಳು ನಡೆದಿದ್ದು, ಚುನಾವಣೆ ಬಳಿಕ ಹೊಸ ಕಾರ್ಯ ಕಾರಿ ಸಮಿತಿ ಬಂದ ಬಳಿಕ ಇವೆಲ್ಲವನ್ನೂ ಸಿಬಿಐ ತನಿಖೆಗೆ ವಹಿಸಬೇಕು. ಕಷ್ಟ ಪಟ್ಟು ದುಡಿದು ಗಳಿಸಿರುವ ಹಣವನ್ನು ಬಡ ಜನರಿಗೆ ವಾಪಸ್ ಕೊಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

Join Whatsapp
Exit mobile version