Home Uncategorized ಸಾಮಾಜಿಕ ಜಾಲತಾಣ ಬಳಸುವವರು ಜಾಗೃತರಾಗಿರಬೇಕು: ಅನೂಪ್ ಮಾದಪ್ಪ

ಸಾಮಾಜಿಕ ಜಾಲತಾಣ ಬಳಸುವವರು ಜಾಗೃತರಾಗಿರಬೇಕು: ಅನೂಪ್ ಮಾದಪ್ಪ

ಮಡಿಕೇರಿ: ಮೊಬೈಲ್ ನಲ್ಲಿ ವಾಟ್ಸಪ್, ಫೇಸ್ಬುಕ್, ಇನ್ಸ್ ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣ ಬಳಸುವವರು ಹೆಚ್ಚಿನ ಜಾಗೃತೆಯಿಂದ ಇರಬೇಕು ಎಂದು ಮಡಿಕೇರಿ ಗ್ರಾಮಂತರ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹೇಳಿದರು.

 ನಾಪೋಕ್ಲುವಿನ ರಾಫಲ್ಸ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸ್ನೇಹ ಬೆಳೆಸಿಕೊಳ್ಳುವ ನೆಪದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿವೆ. ಇದರ ಬಗ್ಗೆ ಹೆಣ್ಣು ಮಕ್ಕಳು ಹೆಚ್ಚು ಜಾಗೃತರಾಗಿರಬೇಕು. ಅಪರಿಚಿತರಿಗೆ ಪೋಟೋ ಕಳುಹಿಸಿ ಗೊಂದಲಕ್ಕೀಡಾಗುವುದು ಬೇಡ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಸಿದ್ದ ಮಾತನಾಡಿದ ಕಾಲೇಜು ಆಡಳಿತ ಮಂಡಳಿ ನಿರ್ದೇಶಕ ಹಮೀದ್, ವಿದ್ಯಾರ್ಥಿಗಳು ಶಿಸ್ತುನ್ನು ಅಳವಡಿಸಿಕೊಳ್ಳಬೇಕು.

 ಪ್ರತೀ ದಿನ ಇಂಗ್ಲಿಷ್ ಸೇರಿದಂತೆ ಇತರೆ ಭಾಷೆಯ ಪತ್ರಿಕೆಗಳನ್ನು ಓದುವುದರಿಂದ ಭಾಷೆಯ ಬಗ್ಗೆ ಜ್ಞಾನ ಹಾಗೂ ಸಮಾಜದ ಹಾಗು-ಹೋಗುಗಳನ್ನು ಅರಿಯಲು ಸಾಧ್ಯ ಎಂದು ಹೇಳಿದರು. ವೇದಿಕೆಯಲ್ಲಿ ಹೊದ್ದೂರು ಗ್ರಾಂ.ಪಂ ಸದಸ್ಯ ಮೈದು, ನಾಪೋಕ್ಲು ಪಟ್ಟಣದ ಉದ್ಯಮಿ ಎಂ.ಎ ಮನ್ಸೂರು ಆಲಿ ಉಪಸ್ಥಿತರಿದ್ದರು.

Join Whatsapp
Exit mobile version