ಸಲೀಂ ಫೈಝಿ ಇರ್ಫಾನಿ ನಿಧನ: ಪ್ರತ್ಯೇಕ ಪ್ರಾರ್ಥನೆಗೆ SKSSF ಕೊಡಗು ಜಿಲ್ಲಾ ಸಮಿತಿ ಮನವಿ

Prasthutha|

ಮಡಿಕೇರಿ: ಕೇರಳ ಸುನ್ನಿ ಯುವಜನ ಸಂಘ ಆದರ್ಶ ಸಮಿತಿಯ ಸದಸ್ಯರಾಗಿದ್ದ ಸಲೀಂ ಫೈಝಿ ಇರ್ಫಾನಿ ನಿಧನಕ್ಕೆ SKSSF ಕೊಡಗು ಜಿಲ್ಲಾ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.

- Advertisement -


ಯುವ ಪಂಡಿತರಾಗಿದ್ದ ಸಲೀಂ ಫೈಝಿ ಸುನ್ನಿ ಆಶಯ ಚರ್ಚಾ ವೇದಿಕೆಗಳಲ್ಲಿ ಅತ್ಯಂತ ಗಮನ ಸೆಳೆದಿದ್ದರು, ಇವರ ನಿಧನವು ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟ ಎಂದು ಜಿಲ್ಲಾ ಸಮಿತಿಯು ಪ್ರಕಟನೆಯಲ್ಲಿ ತಿಳಿಸಿದೆ.


ಸುನ್ನೀ ಆಶಯದ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಸಲೀಂ ಫೈಝಿಯವರ ಅಗಲುವಿಕೆಯು ತೀವ್ರ ನೋವು ತಂದಿದೆ, ಇರ್ಫಾನಿ, ಫೈಝಿ, ನಿಝಾಮಿ ಹಾಗೂ ಅಝ್ಹೆರಿ ನಾಲ್ಕು ಬಿರುದು ಪಡೆದಿದ್ದರು. ಉಸ್ತಾದರ ಹೆಸರಿನಲ್ಲಿ ಪ್ರತ್ಯೇಕ ಪ್ರಾರ್ಥನೆ ಮತ್ತು ಮಯ್ಯಿತ್ ನಮಾಝ್ ನಿರ್ವಹಿಸಲು SKSSF ಕೊಡಗು ಜಿಲ್ಲಾಧ್ಯಕ್ಷರಾದ ತಮ್ಲೀಕ್ ದಾರಿಮಿ ತಿಳಿಸಿದ್ದಾರೆ.

- Advertisement -

Join Whatsapp
Exit mobile version