Home ಟಾಪ್ ಸುದ್ದಿಗಳು ಸ್ಕೋಡಾ ಆಟೋ ಫೋಕ್ಸ್ ವ್ಯಾಗನ್ ಇಂಡಿಯಾ ನಿರ್ವಹಣಾ ನಿರ್ದೇಶಕ ಬೋಪರಾಯ್ ರಾಜೀನಾಮೆ

ಸ್ಕೋಡಾ ಆಟೋ ಫೋಕ್ಸ್ ವ್ಯಾಗನ್ ಇಂಡಿಯಾ ನಿರ್ವಹಣಾ ನಿರ್ದೇಶಕ ಬೋಪರಾಯ್ ರಾಜೀನಾಮೆ

ಸ್ಕೋಡಾ ಆಟೋ ಫೋಕ್ಸ್ ವ್ಯಾಗನ್ ಇಂಡಿಯಾ ಪ್ರೈ. ಲಿ.ನ ನಿರ್ವಹಣಾ ನಿರ್ದೇಶಕ ಗುರುಪ್ರತಾಪ್ ಬೋಪರಾಯ್ ಅವರು 2022ರ ಜನವರಿ 1ಕ್ಕೆ ಜಾರಿಯಾಗುವಂತೆ ತನ್ನ ರಾಜೀನಾಮೆ ಸಲ್ಲಿಸಿದ್ದಾರೆ.

ಜನವರಿ 1ರಿಂದ ಕ್ರಿಸ್ಟಿಯನ್ ಕಾನ್ ವಾನ್ ಸೀಲೆನ್ ಅವರು ವಿಡಬ್ಲ್ಯು ಗುಂಪಿನ ಚೇರ್ ಮನ್ ಆಗಿ ಎಸ್ ಎವಿಡಬ್ಲ್ಯುಐಪಿಎಲ್ ಭಾರತೀಯ ನಿರ್ವಹಣೆಯ ಜವಾಬ್ದಾರಿಯನ್ನು ತಾತ್ಕಾಲಿಕವಾಗಿ ವಹಿಸಿಕೊಳ್ಳುವರು.

ಬೋಪರಾಯ್ ಜಾಗಕ್ಕೆ ಮುಂದೆ ಯಾರು ಎಂಬುದನ್ನು ಶೀಘ್ರವೇ ಘೋಷಿಸುವುದಾಗಿ ಕಂಪೆನಿ ಹೇಳಿದೆ. 

“ನಾವು ತೀವ್ರ ವಿಷಾದದಿಂದ ಗುರುಪ್ರತಾಪ್ ರ ರಾಜೀನಾಮೆಯನ್ನು ಒಪ್ಪಿಕೊಳ್ಳುತ್ತಿದ್ದೇವೆ. ಗುಂಪಿನ ಭಾರತೀಯ ವ್ಯವಹಾರವನ್ನು ಸಂಕೀರ್ಣ ವಿಲೀನದ ಜೊತೆಗೆ ಮುನ್ನಡೆಸಿದ್ದಕ್ಕೆ, ಭಾರತದಲ್ಲಿ ಗುಂಪಿನ 2.0 ಯೋಜನೆಯನ್ನು ಸಣ್ಣ ತೊಂದರೆಯ ನಡುವೆಯೂ ನಿಶ್ಚಿತವಾಗಿ ಜಾರಿಗೆ ತರುವಲ್ಲಿ ಅವರ ಮಹೋನ್ನತ ಪಾತ್ರವನ್ನು, ಸಾಂಕ್ರಾಮಿಕದ ಕಾಲದ ಸವಾಲಲ್ಲೂ ಗುಂಪನ್ನು ಕೊಂಡೊಯ್ದ ಗುರುಪ್ರತಾಪ್ ರ ಸಾಧನೆಗೆ ನಾವು ಉಪಕೃತರಾಗಿದ್ದೇವೆ” ಎಂದು ಸ್ಕೋಡಾ ಆಟೋ ಗುಂಪಿನ ಚೇರ್ ಮನ್ ಥಾಮಸ್ ಶೇಫೆರ್ ಹೇಳಿದರು.

Join Whatsapp
Exit mobile version