Home ಟಾಪ್ ಸುದ್ದಿಗಳು ಪುಲ್ವಾಮಾ ಹುತಾತ್ಮ ಸೈನಿಕನ ಸಹೋದರಿಯ ವಿವಾಹ ನಡೆಸಿಕೊಟ್ಟ ಸಿಆರ್‌ಪಿಎಫ್ ಯೋಧರು

ಪುಲ್ವಾಮಾ ಹುತಾತ್ಮ ಸೈನಿಕನ ಸಹೋದರಿಯ ವಿವಾಹ ನಡೆಸಿಕೊಟ್ಟ ಸಿಆರ್‌ಪಿಎಫ್ ಯೋಧರು

ಲಖನೌ: ಹುತಾತ್ಮ ಯೋಧನ ಹೋದರಿಯ ವಿವಾಹ ಸಿಆರ್‌ಪಿಎಫ್‌ ಸಿಬ್ಬಂದಿ ನಡೆಸಿಕೊಟ್ಟ ಅವಿಸ್ಮರಣೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಕಳೆದ ವರ್ಷ ಪುಲ್ವಾಮಾ ದಾಳಿಯಲ್ಲಿ ಸಿಆರ್‌ಪಿಎಫ್ ಯೋಧ ಶೈಲೇಂದ್ರ ಸಿಂಗ್ ಮೃತಪಟ್ಟಿದ್ದರು.

ಉತ್ತರ ಪ್ರದೇಶದ ಯೋಧನ ನಿವಾಸಕ್ಕೆ ಆಗಮಿಸಿದ ಸಿಆರ್‌ಪಿಎಫ್ ಸಿಬ್ಬಂದಿ, ಸಹೋದರರು ಮದುವೆಯಲ್ಲಿ ನೆರವೇರಿಸಬೇಕಾದ ಎಲ್ಲ ಕಾರ್ಯಗಳನ್ನು ತಾವೇ ಮುಂದೆ ನಿಂತು ನಿರ್ವಹಿಸುವ ಮೂಲಕ ಅಣ್ಣನಿಲ್ಲದ ಕೊರತೆಯನ್ನು ನೀಗಿಸುವ ಪ್ರಯತ್ನ ಮಾಡಿದ್ದಾರೆ.

ಸಮವಸ್ತ್ರ ಧರಿಸಿರುವ ಸಿಆರ್‌ಪಿಎಫ್ ಯೋಧರು ವಧುವನ್ನು ಕರೆತರುತ್ತಿರುವುದನ್ನು ಸಿಆರ್‌ಪಿಎಫ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ #GoneButNotForgotten ಎಂದು ಹ್ಯಾಶ್ ಟ್ಯಾಗ್ ನೀಡಿ ಶೇರ್ ಮಾಡಿದ್ದು, ‘ಹುತಾತ್ಮ ಯೋಧ ಶೈಲೇಂದ್ರ ಪ್ರತಾಪ್ ಸಿಂಗ್ ಅವರ ಸಹೋದರಿಯ ವಿವಾಹ ಕಾರ್ಯಕ್ರಮದಲ್ಲಿ ಹಿರಿಯ ಸಹೋದರರಾಗಿ ಸಿಆರ್‌ಪಿಎಫ್ ಯೋಧರು ಪಾಲ್ಗೊಂಡರು’ಎಂದು ಶೀರ್ಷಿಕೆ ನೀಡಲಾಗಿದೆ.

Join Whatsapp
Exit mobile version