Home ಟಾಪ್ ಸುದ್ದಿಗಳು ಉಕ್ರೇನ್ ಸೇನೆಗೆ ಸೇರ್ಪಡೆಗೊಂಡ ‘ಡೆಡ್ಲಿ ಸ್ನೈಪರ್’;ಮೊದಲ ದಿನವೇ ಹತರಾದ ಆರು ರಷ್ಯಾ ಸೈನಿಕರು

ಉಕ್ರೇನ್ ಸೇನೆಗೆ ಸೇರ್ಪಡೆಗೊಂಡ ‘ಡೆಡ್ಲಿ ಸ್ನೈಪರ್’;ಮೊದಲ ದಿನವೇ ಹತರಾದ ಆರು ರಷ್ಯಾ ಸೈನಿಕರು

ಕೀವ್: ರಷ್ಯಾ-ಉಕ್ರೇನ್ ಯುದ್ಧ ನಿರ್ಣಾಯಕ ಹಂತ ತಲುಪಿರುವಂತೆಯೇ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಯವರ ಮನವಿ ಮೇರೆಗೆ ಆಗಮಿಸಿದ ಕೆನಡಾ ಮೂಲದ ಯೋಧ ಇದೀಗ ಉಕ್ರೇನ್ ಪರವಾಗಿ ಯುದ್ಧ ಮಾಡುತ್ತಿದ್ದಾರೆ.

ಕೆನಡಾ ಸೇನೆಯಲ್ಲಿದ್ದ ಡೆಡ್ಲಿ ಸ್ನೈಪರ್ ಎಂದೇ ಖ್ಯಾತರಾದ, ರಾಯಲ್ ಕೆನಡಿಯನ್ 22ನೇ ರೆಜಿಮೆಂಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಯೋಧ ‘ವಾಲಿ’ ಉಕ್ರೇನ್ ಪರವಾಗಿ ರಷ್ಯಾ ವಿರುದ್ಧ ಯುದ್ಧ ಮಾಡುತ್ತಿದ್ದಾರೆ. ಇಟ್ಟ ಗುರಿ ತಪ್ಪದ ಯೋಧ ಎಂದೇ ಖ್ಯಾತರಾಗಿರುವ ವಾಲಿ ಇದೀಗ ಉಕ್ರೇನ್ ಸೇನೆಯ ಪರ ಹೋರಾಡುತ್ತಿದ್ದಾರೆ.

ಯುದ್ಧ ನಡೆಯುತ್ತಿರುವ ಉಕ್ರೇನ್ನಲ್ಲಿ ಅಲ್ಲಿನ ಸೇನೆಯೊಂದಿಗೆ ಸೇರಿ ದೇಶದ ನಾಗರಿಕರೂ ಕೂಡ ರಷ್ಯಾ ವಿರುದ್ಧ ಹೋರಾಡುತ್ತಿದ್ದು,ಇನ್ನೊಂದೆಡೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿನೀಡಿದ್ದ ಕರೆಗೆ ಸ್ಪಂದಿಸಿದ  ಹಲವು ಭಾರತೀಯರು ಸೇರಿದಂತೆ ಯುಎಸ್, ಯುಕೆ ಸೇರಿ ಹಲವು ದೇಶಗಳ ವಿದೇಶಗಳ 20 ಸಾವಿರಕ್ಕೂ ಅಧಿಕ ಸ್ವಯಂ ಸೇವಕರು ಉಕ್ರೇನ್ ನೆಲದಲ್ಲಿ ನಿಂತು ರಷ್ಯಾ ವಿರುದ್ಧ ಸೆಣೆಸುತ್ತಿದ್ದಾರೆ

ವಾಲಿ ಎಂಬುದು ಆತನ  ನಿಜನಾಮವಲ್ಲ.ಈ ಹಿಂದೆ ಆಫ್ಘಾನಿಸ್ತಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೇಳೆ ಹಲವು ಬಂಡುಕೋರರನ್ನು ಹೊಡೆದುರುಳಿಸಿರುವ  ಇವರಿಗೆ ರಕ್ಷಕ ಎಂಬ ಅರ್ಥವಿರುವ ‘ವಾಲಿ’ ಎಂಬ ಅರೇಬಿಕ್ ಹೆಸರನ್ನು ಅಫ್ಘಾನಿಸ್ತಾನ ಕೊಟ್ಟಿದೆ. ಇದೀಗ ಈ ಸೈನಿಕ ವಾಲಿ ಎಂಬ ಹೆಸರಿನಿಂದಲೇ ಪ್ರಸಿದ್ಧರಾಗಿದ್ದಾರೆ.

ಜಗತ್ತಿನ ಅತ್ಯುತ್ತಮ ಸ್ನೈಪರ್ಗಳಲ್ಲಿ  ಒಬ್ಬರಾದ 40 ವರ್ಷದ ವಾಲಿ ಒಬ್ಬ ಕಂಪ್ಯೂಟರ್ ವಿಜ್ಞಾನಿಯಾಗಿದ್ದಾರೆ. ವಿವಾಹಿತ ‘ವಾಲಿ’ ಗೆ ಒಂದುವರ್ಷದ ಮಗುವಿದೆ ಎನ್ನಲಾಗಿದೆ. ಆದರೂ ತನ್ನ ಕುಟುಂಬವನ್ನೆಲ್ಲ ಬಿಟ್ಟು ಉಕ್ರೇನಿಯನ್ನಿರಿಗೆ ಸಹಾಯ ಮಾಡಲು ಬಂದಿದ್ದೇನೆ ಎಂದು ಮಾಧ್ಯಮದವರೊಂದಿಗೆ ವಾಲಿ ಹೇಳಿದ್ದಾರೆ.

ಉಕ್ರೇನ್ ನಲ್ಲಿ ಕರ್ತವ್ಯಕ್ಕೆ ಹಾಜರಾದ ಮೊದಲ ದಿನವೇ ರಷ್ಯಾದ ಆರು ಸೈನಿಕರನ್ನುವಾಲಿ ಹೊಡೆದುರುಳಿಸಿದ್ದಾರೆ ಎಂದು ವರದಿಯಾಗಿದೆ. 2009ರಿಂದ 2011ರವರೆಗೆ ಅಫ್ಘಾನಿಸ್ತಾನದ ಕಂದಹಾರ್ ಹೋರಾಟದಲ್ಲೂ ಪಾಲ್ಗೊಂಡಿದ್ದರು. ಈ ಹಿಂದೆ ಇರಾಕ್‌ ಯುದ್ಧದಲ್ಲಿ 3.5 ಕಿ.ಮೀ. ದೂರದಿಂದ ಮೆಕ್‌ಮಿಲನ್‌ ಟ್ಯಾಕ್‌-50 ರೈಫಲ್‌ ಬಳಸಿ ಐಸಿಸ್‌ ಉಗ್ರನೊಬ್ಬನನ್ನು ಕೊಂದ ದಾಖಲೆ ವಾಲಿ ಹೆಸರಿನಲ್ಲಿದೆ.

ಉತ್ತಮ ಸ್ನೈಪರ್ (ಗುರಿಕಾರ) ಎಂದು ಕರೆಸಿಕೊಳ್ಳಬೇಕಾದರೆ ದಿನಕ್ಕೆ 5-6 ಮಂದಿಯನ್ನು ಮತ್ತು  ಶ್ರೇಷ್ಠ ಸ್ನೈಪರ್ ಎಂಬ ಪಟ್ಟ ಬೇಕಾದರೆ ದಿನಕ್ಕೆ 7-10 ಮಂದಿಯನ್ನಾದರೂ ಕೊಲ್ಲುವಂತಿರಬೇಕು. ಆದರೆ ವಾಲಿ ದಿನಕ್ಕೆ 40 ಜನರನ್ನು ಕೊಲ್ಲುವ ಸಾಮರ್ಥ್ಯ ಹೊಂದಿದ್ದು, ಡೆಡ್ಲಿ ಸ್ನೈಪರ್ ಎಂದೇ ಖ್ಯಾತರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Join Whatsapp
Exit mobile version