Home ಟಾಪ್ ಸುದ್ದಿಗಳು ರಾಜ್ಯದ ಹಲವೆಡೆ ಕಿದ್ವಾಯಿ ಮಾದರಿಯ ಪ್ರಾದೇಶಿಕ ಚಿಕಿತ್ಸಾ ಕೇಂದ್ರ: ಡಾ.ಕೆ.ಸುಧಾಕರ್

ರಾಜ್ಯದ ಹಲವೆಡೆ ಕಿದ್ವಾಯಿ ಮಾದರಿಯ ಪ್ರಾದೇಶಿಕ ಚಿಕಿತ್ಸಾ ಕೇಂದ್ರ: ಡಾ.ಕೆ.ಸುಧಾಕರ್

ಬೆಂಗಳೂರು: ಕಿದ್ವಾಯಿ ಮಾದರಿಯ ಪ್ರಾದೇಶಿಕ ಚಿಕಿತ್ಸಾ ಕೇಂದ್ರಗಳನ್ನು ರಾಜ್ಯದ ಹಲವೆಡೆ ಆರಂಭಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ವಿಧಾನಪರಿಷತ್ತಿನಲ್ಲಿಂದು ತಿಳಿಸಿದರು.

ಶೂನ್ಯವೇಳೆಯಲ್ಲಿ ಮಾತನಾಡಿದ ಸಚಿವರು, ಈಗಾಗಲೇ ತುಮಕೂರು, ಕಲಬುರಗಿ, ಮಂಡ್ಯದಲ್ಲಿ ಕ್ವಿದ್ವಾಯಿ ಕೇಂದ್ರಗಳು ಶುರುವಾಗಿವೆ, ಬಜೆಟ್ ನಲ್ಲಿ ಬೆಳಗಾವಿ , ಮೈಸೂರಿನಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸುವ ಘೋಷಣೆ ಮಾಡಲಾಗಿದೆ ಎಂದರು.

ವಿಶ್ವದಲ್ಲೇ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಂದಾಜಿನ ಪ್ರಕಾರ 2025ರ ವೇಳೆಗೆ ಈಗ ಇರುವ ರೋಗಿಗಳ ಸಂಖ್ಯೆ ಶೇಕಡಾ 10ರಿಂದ 11ರಷ್ಟು ಹೆಚ್ಚಾಗುವ ಆತಂಕ ಇದೆ. ಕ್ಯಾನ್ಸರ್ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಶೂನ್ಯವೇಳೆಯಲ್ಲಿ ಕಾಂಗ್ರೆಸ್ ನ ಹರೀಶ್ ಕುಮಾರ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಸಚಿವರು, ಬೆಂಗಳೂರು, ಭಾರತ ಮಾತ್ರವಲ್ಲ. ವಿಶ್ವದಲ್ಲೇ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಂದಾಜಿನ ಪ್ರಕಾರ 2025ರ ವೇಳೆಗೆ ಈಗ ಇರುವ ರೋಗಿಗಳ ಸಂಖ್ಯೆಗಿಂದಲೂ ಶೇ.10ರಿಂದ 11ರಷ್ಟು ಹೆಚ್ಚಾಗುವ ಆತಂಕ ಇದೆ. ಇದನ್ನು ನಿಯಂತ್ರಿಸಲು 30 ವರ್ಷ ಮೇಲ್ಪಟ್ಟ ಪ್ರತಿ ಪುರುಷ-ಮಹಿಳೆಯರು ತಲಾ ಐದು ವರ್ಷಕ್ಕೊಮ್ಮೆ ಬಾಯಿ, ಸ್ತನ ಕ್ಯಾನ್ಸರ್ ನ ತಪಾಸಣೆ ಮಾಡಿಸಿಕೊಳ್ಳಬೇಕು. ತಾಲ್ಲೂಕು ಕೇಂದ್ರಗಳಲ್ಲಿ ತಪಾಸಣಾ ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪರಿಣಿತಿ ಪಡೆದಿರುವ ಕಿದ್ವಾಯಿ ಮಾದರಿಯ ಪ್ರಾದೇಶಿಕ ಚಿಕಿತ್ಸಾ ಕೇಂದ್ರಗಳನ್ನು ರಾಜ್ಯದ ಹಲವೆಡೆ ಆರಂಭಿಸಲಾಗುತ್ತಿದೆ. ಪ್ರಸಕ್ತ ಬಜೆಟ್ ನಲ್ಲಿ ಬೆಳಗಾವಿ, ಮೈಸೂರಿನಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸುವ ಘೋಷಣೆ ಮಾಡಲಾಗಿದೆ. ಈಗಾಗಲೇ ತುಮಕೂರು, ಕಲಬುರಗಿ, ಮಂಡ್ಯದಲ್ಲಿ ಕ್ವಿದ್ವಾಯಿ ಕೇಂದ್ರಗಳು ಶುರುವಾಗಿವೆ ಎಂದರು.

ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆರಂಭಿಕ ತಪಾಸಣೆ, ಪತ್ತೆಯಿಂದ ಕ್ಯಾನ್ಸರ್ ಚಿಕಿತ್ಸೆ ಸುಲಭವಾಗುತ್ತದೆ. ಜನ ಸುರಕ್ಷಿತ ಆರೋಗ್ಯ ಜೀವನ ಶೈಲಿಯನ್ನು ಅಳವಡಿಸಿಕೊಳ್ಗಬೇಕು. ತಂಬಾಕು ಚಟದಿಂದ ದೂರ ಇರಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಮಧ್ಯ ಪ್ರವೇಶಿದ ಸದಸ್ಯ ಲಕ್ಷ್ಮಣ ಸವದಿ, ಕ್ಯಾನ್ಸರ್ ರೋಗ ಇನ್ನೂ ಹೆಚ್ಚಾಗುವ ಆತಂಕ ಇದೆ. ಸಿಗರೇಟು, ತಂಬಾಕು ತಿನ್ನದೇ ಇರುವವರಿಗೂ ಕ್ಯಾನ್ಸರ್ ಬರುತ್ತಿದೆ. ಬದಲಾದ ಆಹಾರ ಮತ್ತು ಕೃಷಿ ಪದ್ಧತಿಯೂ ಕ್ಯಾನ್ಸರ್ ಕಾರಣ ಎಂಬ ಮಾಹಿತಿ ಇವೆ. ಈ ಬಗ್ಗೆ ಇಡೀ ದಿನ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕಿದೆ. ಅದಕ್ಕಾಗಿ ಸಭಾಪತಿ ನಿಗದಿ ಮಾಡಿ ಎಂದು ಸಭಾಪತಿ ಅವರಲ್ಲಿ ಮನವಿ ಮಾಡಿದರು.

Join Whatsapp
Exit mobile version