Home ಟಾಪ್ ಸುದ್ದಿಗಳು ಕಾರಿಗೆ ಢಿಕ್ಕಿ ಹೊಡೆದು ಪಾದಚಾರಿಗಳ ಮೇಲೆ ಹರಿದ ಟ್ರಕ್| 6 ಮಂದಿ ಮೃತ್ಯು

ಕಾರಿಗೆ ಢಿಕ್ಕಿ ಹೊಡೆದು ಪಾದಚಾರಿಗಳ ಮೇಲೆ ಹರಿದ ಟ್ರಕ್| 6 ಮಂದಿ ಮೃತ್ಯು

ಲಕ್ನೋ: ಟ್ರಕ್‌ ವೊಂದು ಕಾರಿಗೆ ಢಿಕ್ಕಿ ಹೊಡೆದು, ಪಾದಚಾರಿಗಳ ಮೇಲೆ ಹರಿದ ಪರಿಣಾಮ 6 ಮಂದಿ ಮೃತಪಟ್ಟ ದಾರುಣ ಘಟನೆ ಲಕ್ನೋ-ಕಾನ್ಪುರ ಹೆದ್ದಾರಿಯ ಅಚಲಗಂಜ್ ದಲ್ಲಿ ಭಾನುವಾರ (ಜ.22 ರಂದು) ನಡೆದಿದೆ.

ಭಾನುವಾರ ಸಂಜೆ 7 ಗಂಟೆಯ ಸಮಯದಲ್ಲಿ ಲಕ್ನೋ-ಕಾನ್ಪುರ ಹೆದ್ದಾರಿಯ ಅಚಲಗಂಜ್ ದಲ್ಲಿ ವೇಗವಾಗಿ ಬಂದ ಟ್ರಕ್‌ ವೊಂದು ಕಾರಿಗೆ ಢಿಕ್ಕಿ ಹೊಡೆದು ಪಾದಚಾರಿಗಳ ಮೇಲೆ ಹರಿದಿದೆ. ಟ್ರಕ್ ಕಾರನ್ನು ಎಳೆದುಕೊಂಡು ಹೋದ ಪರಿಣಾಮ ಕಾರು ಕಂದಕಕ್ಕೆ ಉರುಳಿದೆ.

ರಸ್ತೆಯಲ್ಲಿದ್ದ ಮಹಿಳೆ,ಮಗಳು ಸೇರಿದಂತೆ ಘಟನೆಯಲ್ಲಿ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ. ಮೃತರನ್ನು ಛೋಟ್ಟೆಲಾಲ್ (32), ಶಿವಾಂಗ್ (30), ವಿಮಲೇಶ್ (60), ರಾಂಪ್ಯಾರಿ (45) ಮತ್ತು ಆಕೆಯ ಮಗಳು ಶಿವಾನಿ (13) ಎಂದು ಗುರುತಿಸಲಾಗಿದೆ.

ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Join Whatsapp
Exit mobile version