Home ಟಾಪ್ ಸುದ್ದಿಗಳು ಗಾಝಾದಲ್ಲಿ ಪರಿಸ್ಥಿತಿ ಶೋಚನೀಯ, ಹತಾಶೆಗೊಂಡ ಜನತೆ: ವಿಶ್ವಸಂಸ್ಥೆ ಏಜೆನ್ಸಿ

ಗಾಝಾದಲ್ಲಿ ಪರಿಸ್ಥಿತಿ ಶೋಚನೀಯ, ಹತಾಶೆಗೊಂಡ ಜನತೆ: ವಿಶ್ವಸಂಸ್ಥೆ ಏಜೆನ್ಸಿ

TOPSHOT - Palestinians assess the damage caused by Israeli air strikes, in Beit Hanun in the northern Gaza Strip, on May 14, 2021. - Israel pounded Gaza and deployed extra troops to the border as Palestinians fired barrages of rockets back, with the death toll in the enclave on the fourth day of conflict climbing to over 100. (Photo by MAHMUD HAMS / AFP) (Photo by MAHMUD HAMS/AFP via Getty Images)

ಗಾಝಾ: ಗಾಝಾದಲ್ಲಿ ವಿಶ್ವಸಂಸ್ಥೆಯ ಫೆಲೆಸ್ತೀನೀಯನ್ ನಿರಾಶ್ರಿತರ ಏಜೆನ್ಸಿಯ ಗೋದಾಮು ಮತ್ತು ವಿತರಣಾ ಕೇಂದ್ರಕ್ಕೆ ಸಾವಿರಾರು ಗಾಝಾ ನಿವಾಸಿಗಳು ನುಗ್ಗಿ ಹಿಟ್ಟು ಮತ್ತಿತರ ದೈನಂದಿನ ಅಗತ್ಯದ ವಸ್ತುಗಳನ್ನು ಹೊತ್ತೊಯ್ದಿದ್ದಾರೆ ಎಂದು ವರದಿಯಾಗಿದೆ. ಇದು ಮೂರು ವಾರಗಳ ಯುದ್ಧದ ಪರಿಣಾಮದ ಅಲ್ಲಿನ ಜನರ ಹತಾಶೆಯ ಮಟ್ಟವನ್ನು ತಿಳಿಸುತ್ತಿದ್ದು, ಅಪಾಯಕಾರಿಯಾಗಿದೆ ಎಂದು ಯುಎನ್‌ಆರ್ಡಬ್ಲ್ಯೂಎ ಹೇಳಿದೆ.

ಇಸ್ರೇಲ್ ಗಾಝಾದ ಮೇಲೆ ಬಾಂಬ್ ದಾಳಿ ಆರಂಭಿಸಿದಂದಿನಿಂದ ಗಾಝಾದ ಜನರ ಜೀವನ ತತ್ತರಿಸಿ ಹೋಗಿದ್ದು, ಸಾವಿರಾರು ಮಂದಿ ಸಾವೀಗೀಡಾಗಿದ್ದಾರೆ. ಬದುಕಿರುವವರ ನೆರವು ಪೂರೈಕೆಗೆ ತೊಡಕಾಗಿದೆ. ವಿಶ್ವಸಂಸ್ಥೆಯ ನೆರವು ಏಜೆನ್ಸಿಗಳು ಗಾಝಾದ ದೆಯರ್ ಅಲ್-ಬಲಾಹ್ ನಲ್ಲಿರುವ ತನ್ನ ಗೋದಾಮುಗಳಿಗೆ ಈಜಿಪ್ಟ್ ಮೂಲಕ ಮಾನವೀಯ ನೆರವನ್ನು ಪೂರೈಸುತ್ತಿವೆ. ಆದರೆ ಇವೆಲ್ಲ ಅಲ್ಲಿನ ಶೋಚನೀಯ ಪರಿಸ್ಥಿತಿಗೆ ಸಾಕಾಗುತ್ತಿಲ್ಲ.

ನೇರವಾಗಿ ನೆರವು ವಿತರಣೆ ಮೊಟಕುಗೊಂಡಿದೆ ಮತ್ತು ಈಜಿಪ್ಟ್ ಮೂಲಕ ಟ್ರಕ್ ಗಳಲ್ಲಿ ಪೂರೈಕೆಯಾಗುತ್ತಿರುವ ಅಂತಾರಾಷ್ಟ್ರೀಯ ನೆರವು ಏನೇನೂ ಸಾಕಾಗುತ್ತಿಲ್ಲ. ಸಂಘರ್ಷ ಆರಂಭಕ್ಕೂ ಮುನ್ನ ಮೊದಲು ವಸ್ತುಗಳನ್ನು ಹೊತ್ತ ಸುಮಾರು 500 ಟ್ರಕ್ ಗಳು ಪ್ರತಿ ದಿನ ಈಜಿಪ್ಟ್ ಮೂಲಕ ಗಾಝಾ ತಲುಪುತ್ತಿದ್ದರೆ, ಕಳೆದ 3 ವಾರದಿಂದ ಕೇವಲ 54 ಟ್ರಕ್ ಗಳಲ್ಲಿ ಆಹಾರ ಪೂರೈಕೆಯಾಗಿದೆಯಷ್ಟೇ. ಗಾಝಾಕ್ಕೆ ಇನ್ನಷ್ಟು ಮಾನವೀಯ ನೆರವು ಒದಗಿಸುವ ಪ್ರಯತ್ನ ವಿಫಲವಾಗುತ್ತಿದೆ. ಜೀವನಾವಶ್ಯಕ ವಸ್ತುಗಳಿಗೆ ಬೇಡಿಕೆ ಅಪಾರವಾಗಿದ್ದರೆ ಲಭ್ಯವಾಗಿರುವ ನೆರವಿನ ಸಾಮಗ್ರಿಗಳು ತುಂಬಾ ಕಡಿಮೆಯಾಗಿವೆ. ಇಸ್ರೇಲ್‌ನ ಬಾಂಬ್ ದಾಳಿಯಿಂದಾಗಿ ಗಾಝಾದಲ್ಲಿನ ತನ್ನ 50ಕ್ಕೂ ಅಧಿಕ ಸಿಬಂದಿ ಕೂಡ ಸಾವನ್ನಪ್ಪಿರುವುದರಿಂದ ಸೂಕ್ತ ರೀತಿಯಲ್ಲಿ ನೆರವು ವಿತರಣೆ ಸಾಧ್ಯವಾಗುತ್ತಿಲ್ಲ ಎಂದು ವಿಶ್ವಸಂಸ್ಥೆ ಏಜೆನ್ಸಿ ಹೇಳಿದೆ.

Join Whatsapp
Exit mobile version