Home ಟಾಪ್ ಸುದ್ದಿಗಳು ಉಪ ಚುನಾವಣೆ: ಪ್ರತ್ಯೇಕವಾಗಿ ಪ್ರಚಾರಕ್ಕೆ ಹೊರಟ ಯಡಿಯೂರಪ್ಪ !

ಉಪ ಚುನಾವಣೆ: ಪ್ರತ್ಯೇಕವಾಗಿ ಪ್ರಚಾರಕ್ಕೆ ಹೊರಟ ಯಡಿಯೂರಪ್ಪ !

ಬೆಂಗಳೂರು: ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರತ್ಯೇಕವಾಗಿ ಪ್ರಚಾರ ನಡೆಸಲು ಮುಂದಾಗಿದ್ದಾರೆ.

ನಿನ್ನೆಯಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತಿತರ ಬಿಜೆಪಿ ನಾಯಕರು ಉಪಚುನಾವಣೆಯ ಪ್ರಚಾರ ನಡೆಸಿದ್ದರು. ನಿನ್ನೆ ಬೊಮ್ಮಾಯಿ ಜೊತೆ ಯಡಿಯೂರಪ್ಪ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಲಾಗಿತ್ತಾದರೂ ಯಡಿಯೂರಪ್ಪ ಪ್ರಚಾರದ ಗೈರಾಗಿದ್ದರು. ಆದರೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ನಾಳೆಯಿಂದ ಪ್ರತ್ಯೇಕವಾಗಿ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ದಿನ ಸಿಂಧಗಿ ಹಾಗೂ ಎರಡು ದಿನ ಹಾನಗಲ್ ನಲ್ಲಿ ಪ್ರಚಾರ ಮಾಡುತ್ತೇನೆ. ಪಕ್ಷ ಅಪೇಕ್ಷೆ ಪಟ್ಟರೆ ಎರಡನೇ ಹಂತದ ಪ್ರಚಾರಕ್ಕೂ ಹೋಗುತ್ತೇನೆ. ಅಗತ್ಯ ಬಿದ್ದರೆ ಸಿಎಂ ಜೊತೆಗೂ ಪ್ರಚಾರ ಮಾಡುತ್ತೇನೆ. ಆದರೆ ಪ್ರತ್ಯೇಕ ಪ್ರಚಾರ ದಿಂದ ಹೆಚ್ಚಿನ ಲಾಭ ಇದೆ. ಹಾಗಾಗಿ ಪ್ರತ್ಯೇಕವಾಗಿ ಪ್ರಚಾರ ಮಾಡುತ್ತೇನೆ. ಪಕ್ಷ ಬಯಸಿದರೆ ಇನ್ನಷ್ಟು ದಿನ ಪ್ರಚಾರಕ್ಕೆ ಸಿದ್ಧ ಎಂದು ತಿಳಿಸಿದ್ದಾರೆ.

Join Whatsapp
Exit mobile version