Home ಕರಾವಳಿ ಸಂಘಟನೆಗಳಲ್ಲಿ ತೊಡಗಿಸಿಕೊಂಡರೆ ಇದೇ ರೀತಿ ಸಾವು ಸಹಜ: ಪ್ರವೀಣ್ ಸಂಬಂಧಿ ಹೇಳಿಕೆ

ಸಂಘಟನೆಗಳಲ್ಲಿ ತೊಡಗಿಸಿಕೊಂಡರೆ ಇದೇ ರೀತಿ ಸಾವು ಸಹಜ: ಪ್ರವೀಣ್ ಸಂಬಂಧಿ ಹೇಳಿಕೆ

ಬೆಳ್ಳಾರೆ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಮಂಗಳವಾರ ರಾತ್ರಿ ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಕೊಲೆಗೈದು ಪರಾರಿಯಾಗಿದ್ದಾರೆ.


ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರವೀಣ್ ನೆಟ್ಟಾರು ಸಂಬಂಧಿಯೋರ್ವರು, ಹಿಂದೂ ಹಿಂದೂ ಎಂದು ಹೇಳಿ ಪ್ರವೀಣ್ ಪ್ರಾಣ ಕಳೆದು ಕೊಂಡ ಎಂದು ಹೇಳಿದ್ದಾರೆ.


ಪ್ರವೀನ್ ಒಳ್ಳೆಯ ಹುಡುಗ, ಪಾಪ ಸಂಘಟನೆಯಲ್ಲಿ ತೊಡಗಿಸಿಕೊಂಡು ಈ ಸ್ಥಿತಿಗೆ ಕಾರಣನಾದ. ಇದನ್ನು ನಾವು ಖಂಡಿಸಬೇಕು. ಇದು ಕೇವಲ ಹಿಂದೂ ಸಂಘಟನೆಯಲ್ಲಿರುವವರಿಗೆ ಮಾತ್ರವಲ್ಲ, ಮುಸ್ಲಿಮರು ಕೂಡ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.


ಸಂಘಟನೆಯಲ್ಲಿ ತೊಡಗಿಸಿಕೊಂಡರೆ ಇದೇ ರೀತಿಯ ಸಾವು ಬರುವುದು ಖಂಡಿತ ಎಂದರು.

Join Whatsapp
Exit mobile version