Home ಟಾಪ್ ಸುದ್ದಿಗಳು ಉಪರಾಷ್ಟ್ರಪತಿ ಸ್ಥಾನಕ್ಕೂ ಮಹಿಳೆಯರನ್ನೇ ಆಯ್ಕೆ ಮಾಡಿ ಇತಿಹಾಸ ನಿರ್ಮಿಸಬೇಕು: ಮೋಟಮ್ಮ

ಉಪರಾಷ್ಟ್ರಪತಿ ಸ್ಥಾನಕ್ಕೂ ಮಹಿಳೆಯರನ್ನೇ ಆಯ್ಕೆ ಮಾಡಿ ಇತಿಹಾಸ ನಿರ್ಮಿಸಬೇಕು: ಮೋಟಮ್ಮ

ಬೆಂಗಳೂರು: ದೇಶದ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆಯಾಗಿದ್ದು, ಉಪರಾಷ್ಟ್ರಪತಿ ಸ್ಥಾನಕ್ಕೂ ಮಹಿಳೆಯರನ್ನೇ ಆಯ್ಕೆ ಮಾಡಿ ಇತಿಹಾಸ ನಿರ್ಮಿಸಬೇಕು ಎಂಬುದು ನಮ್ಮ ಆಶಯ ಎಂದು ಹಿರಿಯ ಕಾಂಗ್ರೆಸ್ ಮುಖಂಡೆ ಮೋಟಮ್ಮ ತಿಳಿಸಿದ್ದಾರೆ.

ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದವರೇ ಆದ ನುರಿತ ಹಾಗೂ ಮುತ್ಸದ್ಧಿ ನಾಯಕಿ ಮಾರ್ಗರೇಟ್ ಆಳ್ವಾ ಅವರು ದೇಶದ ಉಪರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ ಎಂದು ತಿಳಿಸಿದರು.

ಈ ವಿಚಾರವಾಗಿ ಮೋದಿ ಅವರ ಪಕ್ಷ ಕೂಡ ಮಾರ್ಗರೇಟ್ ಅವರಿಗೆ ಬೆಂಬಲಿಸಿ ಒಮ್ಮತದಿಂದ ಆಯ್ಕೆ ಮಾಡಬಹುದಿತ್ತು. ಇನ್ನು ಕಾಲ ಮಿಂಚಿಲ್ಲ, ಇನ್ನಾದರೂ ಸರಿಯಾದ ತೀರ್ಮಾನ ಕೈಗೊಂಡು ಆಳ್ವಾ ಅವರಿಗೆ ಬೆಂಬಲಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ದ್ವಿತೀಯ ಪ್ರಾಶಸ್ಕೃ ಮತಗಳನ್ನು ನೀಡಿ ಗೆಲ್ಲಿಸಬೇಕು ಎಂದು ಅವರು ಸಂಸದರಲ್ಲಿ ಮನವಿ ಮಾಡಿದರು.

ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ,  ರಾಜ್ಯದ ಹೆಣ್ಣುಮಗಳು ಉಪರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿರುವುದೇ ಹೆಮ್ಮೆಯ ವಿಚಾರ. ಅವರ ಸುದೀರ್ಘ ಸೇವೆಯ ಬಳಿಕ ಅವರಿಗೆ ಈ ಅವಕಾಶ ಸಿಕ್ಕಿದ್ದು, ಎಲ್ಲಾ ಸಂಸದರು ಮಾರ್ಗರೇಟ್ ಆಳ್ವಾ ಅವರನ್ನು ಬೆಂಬಲಿಸಬೇಕು. ಆಳ್ವಾ ಅವರಿಗೆ ದೇಶ ಎದುರಿಸುತ್ತಿರುವ ಹಲವು ಸಮಸ್ಯೆಗಳ ಕುರಿತು ಮಾಹಿತಿಯಿದ್ದು, ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಸ್ಥಾನದಲ್ಲಿ ಮಹಿಳೆಯರು ಆಯ್ಕೆಯಾಗಿ ದೇಶವನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಬೇಕು ಎಂದು ತಿಳಿದಿದೆ. ಆ ಸಾಮರ್ಥ್ಯ ಇವರಿಗೆ ಇದೆ ಎಂದು ನಂಬಿದ್ದೇವೆ. ಹೀಗಾಗಿ ಮಾರ್ಗರೇಟ್ ಆಳ್ವಾ ಅವರಿಗೆ ಬೆಂಬಲಿಸಿ ಇತಿಹಾಸ ಬರೆಯಬೇಕು ಎಂದು ಬಿ.ಟಿ. ಲಲಿತಾ ನಾಯಕ್ ತಿಳಿಸಿದ್ದಾರೆ.

Join Whatsapp
Exit mobile version