Home ಟಾಪ್ ಸುದ್ದಿಗಳು ಪ್ಯಾರಾಲಿಂಪಿಕ್ಸ್ ನಲ್ಲಿ ಹಾಸನ ಮೂಲದ ಯತಿರಾಜ್ ಗೆ ಬೆಳ್ಳಿ ಪದಕ

ಪ್ಯಾರಾಲಿಂಪಿಕ್ಸ್ ನಲ್ಲಿ ಹಾಸನ ಮೂಲದ ಯತಿರಾಜ್ ಗೆ ಬೆಳ್ಳಿ ಪದಕ

ಬೆಂಗಳೂರು: ಜಪಾನ್ ರಾಜಧಾನಿ ಟೋಕಿಯೋದಲ್ಲಿ ವಿಶೇಷ ಚೇತನ ಕ್ರೀಡಾಪಟುಗಳಿಗಾಗಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಉತ್ತರ ಪ್ರದೇಶದ ಜಿಲ್ಲಾಧಿಕಾರಿಯಾಗಿರುವ ಹಾಸನ ಮೂಲದ ಐಎಎಸ್ ಅಧಿಕಾರಿ ಸುಹಾಸ್ ಎಲ್ ಯತಿರಾಜ್ ಅವರು ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.

 ಈ ಸಾಧನೆ ಮಾಡಿದ ಭಾರತದ ಮೊದಲ ಐ ಎ ಎಸ್ ಅಧಿಕಾರಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸುಹಾಸ್ ಒಬ್ಬ ಕನ್ನಡಿಗರಾಗಿದ್ದಾರೆ.  

ಸುಹಾಸ್ ಹಾಸನದ ಲಾಳನಕೆರೆಯಲ್ಲಿ ಜನಿಸಿ ಶಿವಮೊಗ್ಗದಲ್ಲಿ ಬೆಳೆದು ದಕ್ಷಿಣ ಕನ್ನಡದ ಸುರತ್ಕಲ್ ನಲ್ಲಿ ಎನ್ ಐ ಟಿ ಯಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಕಲಿತು ಉತ್ತರ ಪ್ರದೇಶದ ಐ ಎ ಎಸ್ ಅಧಿಕಾರಿಯಾಗಿ ಮಥುರಾದ ಮುಖ್ಯ ಅಭಿವೃದ್ಧಿ ಅಧಿಕಾರಿಯಾಗಿದ್ದ ಇವರು ಆರು ಜಿಲ್ಲೆಗಳ ಡಿ ಎಂ ಆಗಿ ಸೇವೆ ಸಲ್ಲಿಸಿದ ನಂತರ ಈಗ ಗೌತಮ್ ಬುದ್ಧ ನಗರದ ಜಿಲ್ಲೆಯ ದಂಡಾಧಿಕಾರಿಯಾಗಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಹಲವು ಕ್ರೀಡಾಕೂಟದಲ್ಲಿ ಭಾಗವಹಿಸಿ ನಾಲ್ಕು ಚಿನ್ನದ ಪದಕ ಐದು ಬೆಳ್ಳಿ, ಎಂಟು ಕಂಚಿನ ಪದಕ ಗಳಿಸಿದ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

 ಸುಹಾಸ್ ನಮ್ಮ ಕನ್ನಡಿಗ ಎಂದು ಹೇಳಲು ನಮಗೆ ಹೆಮ್ಮೆಯ ವಿಷಯವಾಗಿದೆ. ಸುಹಾಸ್ ಎಲ್ ಯತಿರಾಜ್ ರವರಿಗೆ ನಮ್ಮ ಹೃದಯ ಪೂರ್ವಕ ಅಭಿನಂದನೆಗಳು ಎಂದು ಅಬಕಾರಿ ಹಾಗೂ ಹಾಸನ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version