Home ಟಾಪ್ ಸುದ್ದಿಗಳು ಆನ್ ಲೈನ್ ಗೇಮ್ ನಿಷೇಧಿಸಿ ಇದೇ ಅಧಿವೇಶನದಲ್ಲಿ ಮಸೂದೆ ಮಂಡಿಸಲಿ: ದಿನೇಶ್ ಗುಂಡೂರಾವ್

ಆನ್ ಲೈನ್ ಗೇಮ್ ನಿಷೇಧಿಸಿ ಇದೇ ಅಧಿವೇಶನದಲ್ಲಿ ಮಸೂದೆ ಮಂಡಿಸಲಿ: ದಿನೇಶ್ ಗುಂಡೂರಾವ್

ಬೆಂಗಳೂರು: ಆನ್ ಲೈನ್ ಗೇಮ್ ಗಳ ನಿಷೇಧಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ. ಆನ್ ಲೈನ್ ಗೇಮ್ ಗಳನ್ನು ನಿಷೇಧಿಸುವಂತೆ ನಾನು ಅನೇಕ ಬಾರಿ ಸರ್ಕಾರದ ಗಮನ ಸೆಳೆದಿದ್ದೆ. ಈ ಗೇಮಿಂಗ್ ಆ್ಯಪ್ ಗಳ ಮೂಲಕ ಸುಲಭವಾಗಿ ದುಡ್ಡು ಗಳಿಸೋ ಚಟದಿಂದ ಅದೆಷ್ಟೋ ಜನರ ಬದುಕು ಬೀದಿಗೆ ಬಂದಿದೆ. ಸರ್ಕಾರ ಆದಷ್ಟು ಬೇಗ ಮಸೂದೆ ಜಾರಿಗೆ ತಂದು ನಿಷೇಧ ಮಾಡಲಿ ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.


ಆನ್ಲೈನ್ ಗೇಮ್ ಗಳ ನಿಷೇಧ ಕುರಿತಂತೆ ಹೈಕೋರ್ಟ್ ನಲ್ಲಿ ಈಗಾಗಲೇ PIL ಸಲ್ಲಿಕೆಯಾಗಿದೆ. ಸಾರ್ವಜನಿಕರಿಂದ ಬಂದ ದೂರಿನ ಅನ್ವಯ ನಮ್ಮ ಆರ್.ಜಿ.ಫೌಂಡೇಶನ್ ವತಿಯಿಂದಲೂ PIL ಸಲ್ಲಿಸುವ ಚಿಂತನೆಯಿತ್ತು. ಈ ಮಧ್ಯೆ ಸರ್ಕಾರವೇ ಆನ್ಲೈನ್ ಗೇಮ್ ನಿಷೇಧಕ್ಕೆ ಮುಂದಾಗಿರುವುದು ಉತ್ತಮ ನಡೆ. ಸರ್ಕಾರ ಈ ಅಧಿವೇಶನದಲ್ಲಿ ನಿಷೇಧದ ಕುರಿತು ಮಸೂದೆ ಮಂಡಿಸಲಿ ಎಂದು ದಿನೇಶ್ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

Join Whatsapp
Exit mobile version