Home ಟಾಪ್ ಸುದ್ದಿಗಳು ಸಿಧು ಮೂಸೆವಾಲಾ ಹತ್ಯೆ: 424 ಗಣ್ಯರಿಗೆ ಮತ್ತೆ ಭದ್ರತೆಯನ್ನು ಒದಗಿಸುತ್ತೇವೆ ಎಂದ ಪಂಜಾಬ್ ಸರ್ಕಾರ

ಸಿಧು ಮೂಸೆವಾಲಾ ಹತ್ಯೆ: 424 ಗಣ್ಯರಿಗೆ ಮತ್ತೆ ಭದ್ರತೆಯನ್ನು ಒದಗಿಸುತ್ತೇವೆ ಎಂದ ಪಂಜಾಬ್ ಸರ್ಕಾರ

ಚಂಡೀಗಢ: ಜೂನ್ 7 ರಿಂದ 424 ಗಣ್ಯರಿಗೆ ಮತ್ತೆ ಭದ್ರತೆಯನ್ನು ಒದಗಿಸಲಾಗುವುದು ಎಂದು ಪಂಜಾಬ್ ಸರ್ಕಾರ ತಿಳಿಸಿದ್ದು ಪಂಜಾಬ್ ಗಾಯಕ ಸಿಧು ಮೂಸೆವಾಲಾ ಹತ್ಯೆ ಮಾಡಿದ ಐದು ದಿನಗಳ ಬಳಿಕ ಸರ್ಕಾರದಿಂದ ಈ ಹೇಳಿಕೆ ಹೊರಬಿದ್ದಿದೆ.

424 ಗಣ್ಯರ ಭದ್ರತೆಯನ್ನು ಹಿಂಪಡೆದ ಸರ್ಕಾರದ ನಡೆಯನ್ನು ಪ್ರಶ್ನಿಸಿ ಪಂಜಾಬ್, ಹೈಕೋರ್ಟ್’ನಲ್ಲಿ ಮಾಜಿ ಸಚಿವ ಓಪಿ ಸೋನಿ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯಕ್ಕೆ ಭದ್ರತೆಯನ್ನು ಮತ್ತೆ ವ್ಯವಸ್ಥೆಗೊಳಿಸಲಾಗುವುದೆಂದು ಪಂಜಾಬ್ ಸರ್ಕಾರ ಹೇಳಿಕೊಂಡಿದೆ.

ಭದ್ರತೆಯನ್ನು ಹಿಂಪಡೆದ ಮರು ದಿನವೇ ಖ್ಯಾತ ಗಾಯಕ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ನಡೆಸಿದ ಬಳಿಕ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರ ವಿವಿಐಪಿಗಳ ಭದ್ರತೆಯನ್ನು ಮೊಟಕುಗೊಳಿಸಿದ ಬಗ್ಗೆ ತೀವ್ರ ಟೀಕೆ ಎದುರಿಸುತ್ತಿದೆ.

Join Whatsapp
Exit mobile version