Home ಟಾಪ್ ಸುದ್ದಿಗಳು ಸಿದ್ದರಾಮಯ್ಯ ಸರ್ಕಾರ ನಡೆಯುತ್ತಿದ್ದದ್ದೇ ಡ್ರಗ್ಸ್ ದಂಧೆಯಿಂದ: ನಳಿನ್ ಕುಮಾರ್ ಕಟೀಲ್ ತೀವ್ರ ಆರೋಪ

ಸಿದ್ದರಾಮಯ್ಯ ಸರ್ಕಾರ ನಡೆಯುತ್ತಿದ್ದದ್ದೇ ಡ್ರಗ್ಸ್ ದಂಧೆಯಿಂದ: ನಳಿನ್ ಕುಮಾರ್ ಕಟೀಲ್ ತೀವ್ರ ಆರೋಪ

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ ನಡೆಯುತ್ತಿದ್ದದ್ದೇ ಡ್ರಗ್ಸ್ ದಂಧೆಯಿಂದ. ಆ ದಂಧೆಯಿಂದಲೇ ಸರ್ಕಾರ ಬದುಕಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಪಕ್ಷ ನಾಯಕರ ಮೇಲೆ ತೀವ್ರ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ದಂಧೆಯನ್ನು ನಿಯಂತ್ರಣ ಮಾಡಿದ್ದು ಬಿಜೆಪಿ ಸರ್ಕಾರ. ಯಡಿಯೂರಪ್ಪ ಸಿಎಂ ಆಗಿದ್ದಾಗ, ಬೊಮ್ಮಾಯಿ ಗೃಹ ಸಚಿವ ಆಗಿದ್ದಾಗ ಡ್ರಗ್ಸ್ ದಂಧೆಯ ವಿರುದ್ಧ ಮೇಲೆ ಕ್ರಮ ಕೈಗೊಂಡಿದ್ದರು. ಈಗ ಆರಗ ಜ್ಞಾನೇಂದ್ರ ರಾಜೀನಾಮೆ ಕೇಳುತ್ತಿರುವ ಸಿದ್ದರಾಮಯ್ಯ ನವರು ಅಂದು ಅವರು ಮುಖ್ಯಮಂತ್ರಿಯಾದ ಮರುದಿನವೇ ರಾಜೀನಾಮೆ ನೀಡಬೇಕಿತ್ತು ಎಂದು ಹೇಳಿದರು.

ಅರ್ಕಾವತಿ ಹಗರಣ, ಹಾಸಿಗೆ ದಿಂಬಿನ ಹಗರಣ, ಡಿಕೆ ರವಿ, ಗಣಪತಿ ಕೊಲೆ, ಸಚಿವರ ಭ್ರಷ್ಟಾಚಾರ ಇದ್ಯಾವುದಕ್ಕೂ ಸಿದ್ದರಾಮಯ್ಯ ಕ್ರಮ ಕೈಗೊಂಡಿಲ್ಲ. ಎಲ್ಲಾ ಹಗರಣ ಮುಚ್ಚಿ ಹಾಕಿದ್ದರು. ಸಾಮರ್ಥ್ಯವಿಲ್ಲದ ಸರ್ಕಾರ ಅವರದಾಗಿತ್ತು. ಆದರೆ ನಮ್ಮ ಸರ್ಕಾರ ಭ್ರಷ್ಟಾಚಾರ ಸಹಿಸಲ್ಲ. ಪೊಲೀಸ್ ಅಧಿಕಾರಿಯನ್ನೇ ಬಂಧನ ಮಾಡಿದೆ ಎಂದರು.

ಸಿದ್ದರಾಮಯ್ಯ ಕಾಲದ ನೇಮಕಾತಿ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ನಳಿನ್ ಕಟೀಲ್, ಈಗ ಪಿಎಸ್ ಐ ನೇಮಕಾತಿ ಪ್ರಕರಣ ತನಿಖೆ ನಡೆಯುತ್ತಿದೆ. ಯಾವೆಲ್ಲಾ ಕಾಂಗ್ರೆಸ್ ನಾಯಕರು ಸಿಕ್ಕಿಹಾಕಿಕೊಳ್ಳುತ್ತಾರೆ ಗೊತ್ತಾಗಲಿದೆ. ಆ ಬಳಿಕ ಇದರ ಬಗ್ಗೆಯೂ ತೀರ್ಮಾಣವಾಗುತ್ತದೆ ಎಂದು ವಾಗ್ಧಾಳಿ ಮಾಡಿದರು.

Join Whatsapp
Exit mobile version