Home ಟಾಪ್ ಸುದ್ದಿಗಳು 26 ವರ್ಷಗಳ ಹಿಂದೆ ಮತಗಟ್ಟೆ ಅಧಿಕಾರಿಗೆ ಹಲ್ಲೆ: ಹಿರಿಯ ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್’ಗೆ ಎರಡು...

26 ವರ್ಷಗಳ ಹಿಂದೆ ಮತಗಟ್ಟೆ ಅಧಿಕಾರಿಗೆ ಹಲ್ಲೆ: ಹಿರಿಯ ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್’ಗೆ ಎರಡು ವರ್ಷ ಜೈಲು

ನವದೆಹಲಿ: 1996ರಲ್ಲಿ ಮತಗಟ್ಟೆ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಬಾಲಿವುಡ್ ನಟ, ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್ ಅವರಿಗೆ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಅಧಿಕಾರಿಗೆ ತನ್ನ ಕರ್ತವ್ಯವನ್ನು ನಿರ್ವಹಿಸದಂತೆ ತಡೆದ ಮತ್ತು ಇತರೆ ಮೂರು ಅಪರಾಧ ಕೃತ್ಯಗಳಿಗಾಗಿ ಬಬ್ಬರ್ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 8,500 ರೂ. ದಂಡವನ್ನು ವಿಧಿಸಿದೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಮೇ 1996 ರ ಮೇ ತಿಂಗಳಲ್ಲಿ ನಡೆದ ಚುನಾವಣೆಯ ವೇಳೆ ಮತಗಟ್ಟೆ ಅಧಿಕಾರಿ, ಬಬ್ಬರ್ ವಿರುದ್ಧ ವಝೀರ್’ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇದರನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆಗ ಅವರು ಸಮಾಜವಾದಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದರು.

Join Whatsapp
Exit mobile version