Home ಟಾಪ್ ಸುದ್ದಿಗಳು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಹೋಗಲ್ಲ ಎಂದ ಸಿದ್ದರಾಮಯ್ಯ

‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಹೋಗಲ್ಲ ಎಂದ ಸಿದ್ದರಾಮಯ್ಯ

► ಸ್ಪೀಕರ್ ಕಾಗೇರಿಯಿಂದ ಸಚಿವರು, ಶಾಸಕರಿಗೆ ನಾಳೆ ಚಿತ್ರ ವೀಕ್ಷಣೆಯ ವ್ಯವಸ್ಥೆ

ಬೆಂಗಳೂರು: ರಾಷ್ಟ್ರಾದ್ಯಂತ ಸದ್ಯ ಸುದ್ದಿಯಲ್ಲಿರುವ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವು ಪರ ವಿರೋಧಕ್ಕೆ ಗ್ರಾಸವಾಗಿದೆ. ಇದೀಗಾಗಲೇ ಕರ್ನಾಟಕ ಸರಕಾರವು ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ನೀಡಿದೆ. ಸಚಿವರು, ಶಾಸಕರಿಗೆ ದಿ ಕಾಶ್ಮೀರ್ ಫೈಲ್ಸ್ ಚಿತ್ರದ ವೀಕ್ಷಣೆಗೆ ಮಾಂತ್ರಿ ಮಾಲ್ ನಲ್ಲಿ ಸ್ಪೀಕರ್ ಕಾಗೇರಿ ನಾಳೆ ಸಂಜೆ ವ್ಯವಸ್ಥೆ ಮಾಡಿದ್ದು, ಚಿತ್ರವನ್ನು ನಾನು ವೀಕ್ಷಿಸುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ನಾನು ‘ದಿ ಕಾಶ್ಮೀರಿ ಫೈಲ್ಸ್’ ಚಿತ್ರವನ್ನು ವೀಕ್ಷಿಸುವುದಿಲ್ಲ ಎಂದಿರುವ ಸಿದ್ದರಾಮಯ್ಯ, ‘‘ಸ್ಪೀಕರ್ ಕಾಗೇರಿ ಕರೆದಿದ್ದಾರೆ. ಹೋಗುವವರು ಹೋಗಲಿ’’ ಎಂದಿದ್ದಾರೆ. ಅಲ್ಲದೇ ಚಿತ್ರ ವೀಕ್ಷಿಸದಿರಲು ಕಾರಣ ತಿಳಿಸಿರುವ ಸಿದ್ದರಾಮಯ್ಯ ‘‘ನಾನು ಸಿನಿಮಾ ನೋಡೋದು ಕಡಿಮೆ, ಹಾಗಾಗಿ ಹೋಗುವುದಿಲ್ಲ’’ ಎಂದಿದ್ದಾರೆ.

ಕಾಶ್ಮೀರಿ ಪಂಡಿತರ ಹತ್ಯೆಯ ಕುರಿತಾಗಿರುವ ಈ ಚಿತ್ರವು ಕಪಟ ಸುಳ್ಳನ್ನು ಬಿತ್ತರಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತವಾಗಿದ್ದು, ಬಿಜೆಪಿ ಆಡಳಿತದ ರಾಜ್ಯಗಳುಈ ಚಿತ್ರಕ್ಕೆ ಈಗಾಗಲೇ ತೆರಿಗೆ ವಿನಾಯಿತಿಯನ್ನು ನೀಡಿವೆ.

Join Whatsapp
Exit mobile version