Home ಟಾಪ್ ಸುದ್ದಿಗಳು ಡಿಕೆಶಿ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ

ಡಿಕೆಶಿ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ

ಬೆಂಗಳೂರು: ಒಂದು ವರ್ಷ ಯಶಸ್ವಿ ಆಡಳಿತ ಪೂರೈಸಿದ ಮಾರನೆ ದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಘಟನೆಯೊಂದು ನಡೆದಿದೆ.

ಮೇ 21 ದಿ. ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರ ಪುಣ್ಯಸರಣೆ ದಿನ. ಇದರ ಅಂಗವಾಗಿ ಆಚರಿಸಲಾಗುವ ಭಯೋತ್ಪಾದನಾ ವಿರೋಧಿ ದಿನದ ಪ್ರತಿಜ್ಞಾ ವಿಧಿ ಬೋಧನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಕ್ಕೆ ಹಾಜರಾಗಿದ್ದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಲುಪಿರಲಿಲ್ಲ. ಅವರು ವಿಧಾನಸೌಧದ ಸಮೇಳನ ಸಭಾಂಗಣದಲ್ಲಿ ನಡೆಯುವ ಪ್ರತಿಜ್ಞಾವಿಧಿ ಬೋಧನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಾರ್ಯಕ್ರಮವಿತ್ತು.

11 ಗಂಟೆಗೆ ಸರಿಯಾಗಿ ಸಿದ್ದರಾಮಯ್ಯ ಆಗಮಿಸಿದಾಗ ಮುಖ್ಯ ಕಾರ್ಯದರ್ಶಿ ರಜನೀಶ್‌ ಘೋಯಲ್‌ ಉಪಮುಖ್ಯಮಂತ್ರಿಯವರು ಕೆಳಗಡೆ ಇದ್ದಾರೆ. ನಾವು ಸ್ವಾಗತ ಭಾಷಣ ಮುಗಿಸುವ ವೇಳೆಗೆ ಅವರೂ ಬಂದು ಸೇರಿಕೊಳ್ಳುತ್ತಾರೆ ಎಂದು ಮುಖ್ಯಮಂತ್ರಿಯವರಿಗೆ ವಿವರಿಸಿದರು.

ಇದಕ್ಕೆ ಸಿಡಿಮಿಡಿಗೊಂಡ ಮುಖ್ಯಮಂತ್ರಿ, ಅವರು ಬಂದ್ರೆ ಬರ್ತಾರೆ, ನೀವು ಶುರು ಮಾಡಿ, ನಾನು ಹೋಗಬೇಕಿದೆ ಎಂದು ಹೇಳಿದರು. .ಸ್ವಲ್ಪ ಹೊತ್ತಿನಲ್ಲೇ ಮುಖ್ಯಮಂತ್ರಿಯ ಆಪ್ತ ಕಾರ್ಯದರ್ಶಿ ವೆಂಕಟೇಶ್‌ ಬಂದು ಉಪಮುಖ್ಯಮಂತ್ರಿಯವರು ಕೆಳಗಡೆ ಇದ್ದಾರೆ, ಬರುತ್ತಾರೆ ಎಂದು ಮತ್ತೊಮೆ ವಿವರಿಸಿದರು. ಆದರೆ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಮುಂದುವರೆಸುವಂತೆ ಸೂಚಿಸಿ, ಪ್ರತಿಜ್ಞಾವಿಧಿಯನ್ನೂ ಬೋಧಿಸಿದರು.

ಇದೇ ವೇಳೆ ಕಾರ್ಯಕ್ರಮಕ್ಕೆ ಹಿರಿಯ ಅಧಿಕಾರಿಗಳು ಹಾಜರಾಗದಿರುವ ಬಗ್ಗೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಹನೆ ಹೊರಹಾಕಿದರು. ವಿಧಾನಸೌಧದ ನೆಲಮಹಡಿಯಲ್ಲಿದ್ದ ಡಿ.ಕೆ.ಶಿವಕುಮಾರ್‌, ಕಾರ್ಯಕ್ರಮ ಶುರುವಾದ ಮಾಹಿತಿ ದೊರೆಯುತ್ತಿದ್ದಂತೆ ಅನ್ಯಮನಸ್ಕರಾಗಿ ವಿಧಾನಸೌಧದಿಂದ ನಿರ್ಗಮಿಸಿದ್ದಾರೆ. ಬಳಿಕ ಕೆಪಿಸಿಸಿಯಲ್ಲಿ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ರಾಜೀವ್‌ಗಾಂಧಿ ಪುಣ್ಯಸರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Join Whatsapp
Exit mobile version