Home ಟಾಪ್ ಸುದ್ದಿಗಳು ಬಿಹಾರ: ಚುನಾವಣೋತ್ತರ ಹಿಂಸಾಚಾರಕ್ಕೆ ಓರ್ವ ಬಲಿ

ಬಿಹಾರ: ಚುನಾವಣೋತ್ತರ ಹಿಂಸಾಚಾರಕ್ಕೆ ಓರ್ವ ಬಲಿ

ಸರನ್‌: ಬಿಹಾರದ ಚುನಾವಣೋತ್ತರ ಹಿಂಸಾಚಾರದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚಂದನ್‌ ಯಾದವ್‌ (25) ಮೃತರು.

ಸರನ್‌ ಜಿಲ್ಲೆಯ ಭಿಖಾರಿ ಠಾಕೂರ್‌ ಚೌಕ್‌ ಬಳಿಯ ಬಡಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.

ಈ ಪ್ರದೇಶದಲ್ಲಿ ನಿನ್ನೆ ನಡೆದ ಮತದಾನದ ವೇಳೆ ಅಕ್ರಮಗಳ ಆರೋಪದ ಮೇಲೆ ಬಿಜೆಪಿ ಮತ್ತು ಆರ್‌ಜೆಡಿ ಬೆಂಬಲಿಗರು ಎನ್ನಲಾದ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದ್ದು, ಈ ನಡುವೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸ್‌‍ ವರಿಷ್ಠಾಧಿಕಾರಿ ಗೌರವ್‌ ಮಂಗಳಾ ತಿಳಿಸಿದ್ದಾರೆ.

Join Whatsapp
Exit mobile version