Home ಟಾಪ್ ಸುದ್ದಿಗಳು ಸಿದ್ದರಾಮಯ್ಯರನ್ನು ಅರೆಸ್ಟ್ ಕೂಡಾ ಮಾಡಬಹುದು: ದೂರುದಾರ ಪರ ವಕೀಲ ವಸಂತ ಕುಮಾರ್

ಸಿದ್ದರಾಮಯ್ಯರನ್ನು ಅರೆಸ್ಟ್ ಕೂಡಾ ಮಾಡಬಹುದು: ದೂರುದಾರ ಪರ ವಕೀಲ ವಸಂತ ಕುಮಾರ್

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಕೋರ್ಟ್ ಆದೇಶ ಹೊರಡಿಸಿದೆ. ಈ ವಿಚಾರವಾಗಿ ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲ ವಸಂತ ಕುಮಾರ್ ಪ್ರತಿಕ್ರಿಯಿಸಿದ್ದು, ಸಿಎಂ ಸ್ಥಾನದಲ್ಲಿ ಮುಂದುವರೆದರೆ ಪ್ರಾಮಾಣಿಕ ತನಿಖೆಯಾಗಲ್ಲ. ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಿದಾಗ ಎಫ್ ಐಆರ್ ದಾಖಲಿಸಿ ತನಿಖೆ ಆಗಬೇಕು, ಅರೆಸ್ಟ್ ಕೂಡ ಮಾಡಬಹುದು ಎಂದು ಹೇಳಿದ್ದಾರೆ.


ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಉತ್ತಮ ಆದೇಶ ಕೊಟ್ಟಿದೆ. ನಿನ್ನೆ ಹೈಕೋರ್ಟ್ ಕೊಟ್ಟ ತೀರ್ಪಿನ ಆದೇಶದ ಪ್ರತಿಯನ್ನು ನೀಡಿದ್ದೆವು. ಖಾಸಗಿ ದೂರಿಗೆ ನ್ಯಾಯ ಸಿಕ್ಕಿದೆ. 3 ತಿಂಗಳೊಳಗೆ ತನಿಖಾ ವರದಿ ಸಲ್ಲಿಸಲು ಲೋಕಾಯುಕ್ತಗೆ ಸೂಚನೆ ನೀಡಲಾಗಿದೆ. ಪ್ರಾಮಾಣಿಕವಾಗಿ ತನಿಖೆ ಆಗಬೇಕು ಅಂತಾ ಮನವಿ ಮಾಡುತ್ತೇವೆ ಎಂದಿದ್ದಾರೆ.
ಹೈಕೋರ್ಟ್ ನಲ್ಲಿ ದಾವೆ ಹೂಡುತ್ತೇವೆ. ಆಪಾದನೆ ಬಂದಲ್ಲಿ ಅವರ ಮೇಲೆ ಎಫ್ ಐಆರ್ ಆದರೆ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ಮಾಡುತ್ತಾರೆ. ಸಿಎಂ ರಾಜೀನಾಮೆ ಕೊಡಬೇಕಿದೆ. ತನಿಖಾಧಿಕಾರಿ ಯಾವ ರೀತಿ ಇರುತ್ತೆ ಅಂತ ನೋಡಬೇಕು ಎಂದು ಹೇಳಿದ್ದಾರೆ.


ಕರ್ನಾಟಕಕ್ಕೆ ಮಾಡುವ ಅವಮಾನ: ಸ್ನೇಹಮಹಿ ಕೃಷ್ಣ
ಸ್ನೇಹಮಹಿ ಕೃಷ್ಣ ಪ್ರತಿಕ್ರಿಯಿಸಿದ್ದು, ನ್ಯಾಯಾಲಯ ತಮ್ಮ ವ್ಯಾಪ್ತಿ ಪ್ರಕಾರ ಲೋಕಾಯುಕ್ತ ತನಿಖೆಗೆ ಆದೇಶಿಸಿದೆ. ಎಫ್ ಐಆರ್ ದಾಖಲಾದ ನಂತರ ಸಿಬಿಐಗೆ ನೀಡುವಂತೆ ಹೈಕೋರ್ಟಿನಲ್ಲಿ ಅರ್ಜಿ ಹಾಕುವುದಕ್ಕೆ ನಿರ್ಧರಿಸಿದ್ದೇವೆ. ಅಪರಾಧ ಕೃತ್ಯಗಳಲ್ಲಿ ಆರೋಪಿ ನೇರ ಪಾತ್ರ ವಹಿಸಿರಬೇಕು ಅಂತೇನಿಲ್ಲ. ಪರೋಕ್ಷವಾಗಿ ಭಾಗಿಯಾದ್ದರೂ ಅಪರಾಧ ಕೃತ್ಯ ಆಗುತ್ತೆ. ಸಿದ್ದರಾಮಯ್ಯ ಪರೋಕ್ಷವಾಗಿ ಭಾಗಿಯಾಗಿರೋದಕ್ಕೆ ಸಾಕಷ್ಟು ಸಾಕ್ಷ್ಯ ಕೊಟ್ಟಿದ್ದೇವೆ. ಇದನ್ನೆಲ್ಲ ಪರಿಗಣಿಸಿ ನ್ಯಾಯಾಲಯವು ಈ ಆದೇಶ ಕೊಟ್ಟಿದೆ ಎಂದಿದ್ದಾರೆ.

Join Whatsapp
Exit mobile version