Home ಟಾಪ್ ಸುದ್ದಿಗಳು FIR ಆದ ತಕ್ಷಣ ಸಿಎಂ ರಾಜೀನಾಮೆ ಕೊಡಬೇಕು: ಆರ್.ಅಶೋಕ್

FIR ಆದ ತಕ್ಷಣ ಸಿಎಂ ರಾಜೀನಾಮೆ ಕೊಡಬೇಕು: ಆರ್.ಅಶೋಕ್

ಬೆಂಗಳೂರು: ಎಫ್ ಐಆರ್ ಆದ ತಕ್ಷಣ ಸಿಎಂ ರಾಜೀನಾಮೆ ಕೊಡಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.


ಮುಡಾ ಹಗರಣ ಸಂಬಂಧ ಜನಪ್ರತಿನಿಧಿಗಳ ಕೋರ್ಟ್ ತೀರ್ಪಿನ ಬೆನ್ನಲ್ಲೇ ಜಯನಗರದ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ಮಹತ್ತರ ತಿರುವಿನ ದಿನವಾಗಿದೆ. ರಾಜ್ಯದ ಆಡಳಿತ ನಡೆಸುವ ಮುಖ್ಯಮಂತ್ರಿ ಮೇಲೆ ಆಪಾದನೆ ಬಂದು ಹೈಕೋರ್ಟ್ ಆದೇಶ ಆಗಿದೆ. ಜನ ಪ್ರತಿನಿಧಿಗಳ ಕೋರ್ಟ್ ಎಫ್ಐಆರ್ ಆಗಲಿ ಎಂದು ಹೇಳಿದೆ ಎಂದರು.


ನಮ್ಮ ಮೇಲೆ ಆಪಾದನೆ ಇಲ್ಲ. ಇದು ಬಿಜೆಪಿ ಪ್ರೇರಿತ ಎಂದು ರಾಜಕೀಯ ದಾಳ ಹೂಡಿದ್ದರು. ರಾಜಭವನ ಅನುಮತಿ ಕೊಟ್ಟ ತಕ್ಷಣ ರಾಜಭವನ ಕಡೆ ಕಾಂಗ್ರೆಸ್ ಅವರು ತಿರುಗಿಬಿಟ್ಟರು. ರಾಜಭವನವನ್ನು ಬಾಂಗ್ಲಾದೇಶದ ಮಾದರಿಯಲ್ಲಿ ಸ್ಫೋಟಿಸುತ್ತೀವಿ ಎಂದು ಕಾಂಗ್ರೆಸ್ ಅವರು ವಿಜೃಂಭಣೆ ಮಾಡಿದ್ದರು. ಈಗ ತನಿಖೆಗೆ ಸೂಕ್ತ ಎಂದು ಆದೇಶ ಆಗಿದೆ ಎಂದು ಹೇಳಿದರು.

Join Whatsapp
Exit mobile version