Home ರಾಜ್ಯ ಸಿದ್ದಾಪುರ- ಮಧುರೈ ಕೆಎಸ್ಆರ್ ಟಿ ಸಿ ಬಸ್ ಪುನರಾರಂಭ

ಸಿದ್ದಾಪುರ- ಮಧುರೈ ಕೆಎಸ್ಆರ್ ಟಿ ಸಿ ಬಸ್ ಪುನರಾರಂಭ

ಸಿದ್ದಾಪುರ :ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಸಿದ್ದಾಪುರ- ಮಧುರೈ ಅಂತಾರಾಜ್ಯ ಬಸ್ ಸಂಚಾರ ಇದೀಗ ಮತ್ತೆ ಪುನಾರಂಭಗೊಂಡಿದೆ.


ಕಳೆದ ಹಲವು ವರ್ಷಗಳಿಂದ ಅಂತಾರಾಜ್ಯ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್ ಪ್ರಾರಂಭಿಸಲಾಗಿತ್ತು. ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ತಮಿಳ್ನಾಡು ಮೂಲದ ಹೆಚ್ಚು ಮಂದಿ ಈ ಬಸ್ಸನ್ನು ಅವಲಂಬಿತರಾಗಿದ್ದರು.


ಸಿದ್ದಾಪುರ ಪಾಲಿಬೆಟ್ಟ ಸುತ್ತಮುತ್ತಲಿನಲ್ಲಿ ಗ್ರಾಮಗಳಲ್ಲಿರುವವರು ತಮಿಳುನಾಡಿಗೆ ತೆರಳಲು ಏಕೈಕ ಬಸ್ ಇದಾಗಿದ್ದು ಬಸ್ಸು ಪುನರಾರಂಭದಿಂದ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಕಾವೇರಿ ತಮಿಳು ಸಂಘದ ಜಿಲ್ಲಾಧ್ಯಕ್ಷ ತಿರುಮಲ ರಾಜ ಪತ್ರಿಕೆಗೆ ತಿಳಿಸಿದ್ದಾರೆ. ಸಿದ್ಧಾಪುರದಲ್ಲಿ ಸ್ವಾಗತ.
ತಮಿಳುನಾಡು ಮಧುರೈ ಬಸ್ ಪುನರಾರಂಭಗೊಂಡು ಸಿದ್ದಾಪುರಕ್ಕೆ ಆಗಮಿಸಿದ ಸಂದರ್ಭ ಕಾವೇರಿ ತಮಿಳು ಸಂಘದ ನೇತೃತ್ವದಲ್ಲಿ ಸ್ವಾಗತಿಸಲಾಯಿತು.


ಬಸ್ ಗೆ ವಿಶೇಷ ಪೂಜೆ ನೆರವೇರಿಸಿ ಅಲಂಕಾರ ಮಾಡಿ ಪ್ರಯಾಣಿಕರಿಗೆ ಶುಭ ಕೋರಿದರು.
ಈ ಸಂದರ್ಭ ಕಾವೇರಿ ತಮಿಳು ಸಂಘದ ಉಪಾಧ್ಯಕ್ಷರಾದ ಮೈಕಲ್ ಪಾಲಿಬೆಟ್ಟ, ಕಣ್ಣನ್ ಪ್ರಮುಖರಾದ ಕುಮಾರ್, ಅಳಗು, ಮುರುಗೇಶ್,ಸಬರಿ, ಮೋಹನ್ ರಾಜ್,ಮುತ್ತುವೇಲ್,ತಂಬಿ, ಮಣಿ, ಸರವಣ,ಪೊಲೀಸ್ ಮುಖ್ಯ ಪೇದೆ ಬೆಳ್ಳಿಯಪ್ಪ ಸೇರಿದಂತೆ ಸ್ಥಳೀಯರು ಹಾಜರಿದ್ದರು

Join Whatsapp
Exit mobile version