Home Uncategorized ವುಶು ಚಾಂಪಿಯನ್ ಶಿಪ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಸಿದ್ದಾಪುರ ಸಹೋದರರ ಸಾಧನೆ

ವುಶು ಚಾಂಪಿಯನ್ ಶಿಪ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಸಿದ್ದಾಪುರ ಸಹೋದರರ ಸಾಧನೆ

► ಚಿನ್ನ, ಕಂಚು ಪದಕ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಸಿದ್ದಾಪುರ: ರಾಜ್ಯಮಟ್ಟದ ವುಶು ಚಾಂಪಿಯನ್ ಶಿಪ್ ಸ್ಪರ್ಧೆಯ ಕಿಕ್ ಬಾಕ್ಸಿಂಗ್ ವಿಭಾಗದಲ್ಲಿ ನೆಲ್ಲಿಹುದಿಕೇರಿಯ ಚರಣ್ ಹಾಗೂ ಶ್ರೀಕುಮಾರ್ ಸಹೋದರರು ಚಿನ್ನ ಹಾಗೂ ಕಂಚಿನ ಪದಕ ಗೆಲ್ಲುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಪದಕ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿದ್ದಾರೆ.


ದಕ್ಷಿಣ ಕನ್ನಡ ವುಶು ಅಸೋಶಿಯೇಷನ್, ರಾಜ್ಯ ವುಶು ಅಸೋಶಿಯೇಷನ್, ಆಳ್ವಾಸ್ ಎಜುಕೇಶನ್ ಫೌಂಡೇಶನ್ ಸಹಯೋಗದಲ್ಲಿ ಮೂಡುಬಿದಿರೆ ಆಳ್ವಾಸ್ ನಲ್ಲಿ ಜರುಗಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಇದೀಗ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ನೆಲ್ಲಿಹುದಿಕೇರಿ ಎಪಿಜೆ ಬಡಾವಣೆಯ ಕೆ.ಸಿ ಶಶಿ ರೀನಾ ದಂಪತಿ ಪುತ್ರರಾಗಿರುವ ಸಿದ್ದಾಪುರ ಸಂತ ಅನ್ನಮ್ಮ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಕೆ.ಎಸ್. ಶ್ರೀಚರಣ್ ಚಿನ್ನದ ಪದಕ ಗೆದ್ದರೆ 9ನೇ ತರಗತಿ ವಿದ್ಯಾರ್ಥಿ ಆತನ ಸಹೋದರ ಕೆ.ಎಸ್. ಶ್ರೀಕುಮಾರ್ ಕಂಚಿನ ಪದಕ ಗೆದ್ದು ಕೊಂಡಿದ್ದಾರೆ.


ಈ ಹಿಂದೆ ಕೊಡಗು, ಮಂಗಳೂರು, ಮೈಸೂರು, ಬೆಂಗಳೂರು,ಬಾಗಲಕೋಟೆ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ನಡೆದ ವುಶು ಚಾಂಪಿಯನ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನ,ಬೆಳ್ಳಿಯೊಂದಿಗೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡು ಗ್ರಾಮಕ್ಕೆ ಮಾದರಿಯಾಗಿದ್ದಾರೆ.


ಕಲ್ಕತ್ತಾದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ತರಬೇತುದಾರ ಸುದರ್ಶನ್ ಮಕ್ಕಂದೂರು ಅವರಿಂದ ಕಲಿತು ಕ್ರೀಡಾ ಸಾಧನೆಯ ಮೂಲಕ ಸಣ್ಣ ವಯಸ್ಸಿನಲ್ಲಿ ಸಹೋದರರಿಬ್ಬರು ಗೆಲುವಿನೊಂದಿಗೆ ಚಿನ್ನ, ಬೆಳ್ಳಿ ಪದಕಗಳನ್ನು ಗೆದ್ದಿರುವುದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

Join Whatsapp
Exit mobile version